ಕಾರವಾರ: ಕೇಂದ್ರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಕಾರವಾರ ಇವರು ಸ್ವಚ್ಛ ಬಾರತ 2.0 ಕಾರ್ಯಕ್ರಮದ ಅಂಗವಾಗಿ ಅ.15ರಂದು ನಗರಸಭೆ ಹಾಗೂ ನಗರ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ಪ್ಲಾಸ್ಟಿಕ್ ಫ್ರೀ ಅಭಿಯಾನ ಹಾಗೂ ವಾಲ್ ಪೇಂಟಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಯುವ ಮುಂದಾಳು ವೈಭವ್ ಅವರ ನೇತೃತ್ವದಲ್ಲಿ ದಿವೇಕರ್ ಹಾಗೂ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ 50 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಗರದ ಬೀದಿ ಬೀದಿಗಳಲ್ಲಿ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿದರು ಹಾಗೂ ನಗರ, ಗ್ರಾಮೀಣ ಪೊಲೀಸ್ ಠಾಣೆಯ ಕಂಪೌಂಡ್ ಗೋಡೆಗಳ ಮೇಲೆ ಸ್ವಚ್ಛತೆಗೆ ಅರಿವನ್ನು ಮೂಡಿಸುವ ಚಿತ್ತಾರಗಳನ್ನು ಬಿಡಿಸಿದರು. ಮುಂದೆಯು ಇದೇ ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಸ್ವಚ್ಛತೆಯ ಅರಿವನ್ನು ಮೂಡಿಸುವವರಿದ್ದಾರೆ.
ಕಾರ್ಯಕ್ರಮಕ್ಕೆ ನಗರಸಭೆ ಪೌರಾಯುಕ್ತ ಆರ್.ಪಿ.ನಾಯ್ಕ, ಹಾಗೂ ದೀಪಾ ಶೆಟ್ಟಿ ಸಹಕಾರವನ್ನು ನೀಡಿ ವಿದ್ಯಾರ್ಥಿಗಳಿಗೆ ಉಪಹಾರ ಹಾಗೂ ಪೇಂಟ್ ವ್ಯವಸ್ಥೆ ಮಾಡಿದರು. ಸಹಕರಿಸಿದ ನಗರಸಭೆ ಹಾಗೂ ಪೊಲೀಸ್ ಇಲಾಖೆಗೆ ನೆಹರು ಯುವ ಕೇಂದ್ರದ ಅಧಿಕಾರಿಗಳು ಧನ್ಯವಾದ ತಿಳಿಸಿದ್ದಾರೆ.