ಭಟ್ಕಳ: ಜಾಲಿ ಪಟ್ಟಣ ವ್ಯಾಪ್ತಿಯ ವಿವಿಧ ಅಂಗಡಿಗಳಿಗೆ ದಾಳಿ ಮಾಡಿ ಒಟ್ಟೂ 5 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡು ರೂ.1100 ದಂಡ ವಿಧಿಸಲಾಗಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಂತೆ ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಮಚಂದ್ರ ವೇರ್ಣೇಕರ್ ನೇತೃತ್ವದಲ್ಲಿ ದಾಲಿ ನಡೆಸಲಾಗಿತ್ತು. ಈ ವೇಳೆ ಇನ್ನುಮುಂದೆ ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಲಾಗಿದೆ.
ಈ ದಾಳಿಯಲ್ಲಿ ಜಾಲಿ ಪಟ್ಟಣ ಪಂಚಾಯತ ಅರೋಗ್ಯ ನಿರೀಕ್ಷಕ ವಿನಾಯಕ ನಾಯ್ಕ, ದ್ವಿತೀಯ ದರ್ಜೆ ಸಹಾಯಕ ರವಿ ಕೊರಾರ್, ಪೌರಕಾರ್ಮಿಕ ಸಿಬ್ಬಂದಿಗಳಾದ ರಾಮ, ಶಿವ, ಸತೀಶ್, ಜಯಂತ ಇದ್ದರು.