• Slide
    Slide
    Slide
    previous arrow
    next arrow
  • ಆರೆಕೊಪ್ಪದಲ್ಲಿ ಲಕ್ಷಾಂತರರೂಪಾಯಿ ಕಳ್ಳತನ

    300x250 AD

    ಶಿರಸಿ: ತಾಲೂಕಿನ ಆರೆಕೊಪ್ಪದಲ್ಲಿರುವ ಅಬ್ದುಲ್ ಬಶೀರ ಎಂಬುವವರ ಮನೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ನಗದು ಹಾಗೂ ಒಂದು ಬಂಗಾರದ ಸರವನ್ನು ಕಳವು ಮಾಡಲಾಗಿದೆ.

    ಮನೆಯ ಹಂಚನ್ನು ತೆಗೆದು ಒಳಗೆ ಇಳಿದಿರುವ ಕಳ್ಳರು, ಮೂರು ಗೋದ್ರೆಜ್ ಕಪಾಟ್ ಒಡೆದು ನಗದು ಮತ್ತು ಬಂಗಾರದ ಸರವನ್ನು ಕದ್ದೊಯ್ದಿದ್ದಾರೆ. ಹೆಂಡತಿಗೆ ಅನಾರೋಗ್ಯ ಕಾಡಿದ್ದರಿಂದ ಅಬ್ದುಲ್ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅವರು ನಿಧನರಾಗಿದ್ದರಿಂದ ಮತ್ತೊಂದು ಮನೆಯಲ್ಲಿ ವಿಧಿವಿಧಾನ ಮುಗಿಸಿ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಮನೆಗೆ ಮರಳಿದ್ದರು.

    300x250 AD

    ತಮ್ಮ ಮಗನೊಂದಿಗೆ ಆರೆಕೊಪ್ಪದ ಮನೆಗೆ ಬಂದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಕಂಡು ಬಂದಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಹೆಚ್ಚಿನ ತನಿಖೆಗಾಗಿ ಶ್ವಾನದಳವನ್ನು ಕರೆಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top