Slide
Slide
Slide
previous arrow
next arrow

ಸ್ಪೀಕರ್ ಕಾಗೇರಿಯಿಂದ ಅ.17ಕ್ಕೆ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ

300x250 AD

ಸಿದ್ದಾಪುರ: ಶಾಸಕರಾದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅ.17 ರಂದು ತಾಲೂಕಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹಲವು ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿಪೂಜೆ ನೆರವೇರಿಸುವರು.

ಅಂದು ಬೆಳಿಗ್ಗೆ 10-30 ಕ್ಕೆ ಪಟ್ಟಣದ ಎ.ಪಿ.ಎಮ್.ಸಿ. ಆವರಣ, ಅಡಿಕೆ ಭವನದಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮ, ಸುಕನ್ಯಾ ಸಮೃದ್ದಿ ಪಾಸ್ ಬುಕ್ ವಿತರಣೆ, ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ ಹೊಲಿಗೆ ಯಂತ್ರ ವಿತರಣೆ ನಡೆಯಲಿದೆ. 10-30 ಕ್ಕೆ ಪಾಲಿಟೆಕ್ನಿಕ್ ಕಾಲೇಜಿನ ನೂತನ ಗ್ರಂಥಾಲಯ ಕಟ್ಟಡ ಹಾಗೂ ಲ್ಯಾಬ್ ನಿರ್ಮಾಣದ(ಹೆಚ್ಚುವರಿ ಕಟ್ಟಡಗಳು) ಶಂಕುಸ್ಥಾಪನೆ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಿರ್ಮಾಣ ಮಾಡಿದ ಸರ್.ಎಮ್.ವಿಶ್ವೇಶ್ವರಯ್ಯರವರ ಮೂರ್ತಿ ಅನಾವರಣ; ಹಳೆಯ ವಿದ್ಯಾರ್ಥಿ ಸಂಘದ ಉಧ್ಘಾಟನೆ ಹಾಗೂ “ಭುವನಸಿರಿ” ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 12-30 ಕ್ಕೆ ಇಟಗಿ ಗ್ರಾಮ ಪಂಚಾಯತ ಗುಂಜಗೋಡು ವಾಟಗಾರ ಹೊಳೆಗೆ ಸೇತುವೆ ನಿರ್ಮಾಣದ ಉದ್ಘಾಟನೆ ನಡೆಯಲಿದೆ. 1.15 ಕ್ಕೆ ಇಟಗಿ ಸ.ನಂ.164ರ ಕೆರೆ ಸುಧಾರಣೆ ಕಾಮಗಾರಿಯ ಭೂಮಿ ಪೂಜೆ, ಮಧ್ಯಾಹ್ನ 3-00 ಕ್ಕೆ ವಾಜಗೋಡ ಗ್ರಾಮ ಪಂಚಾಯತ ಗುಡ್ಡೆಕೊಪ್ಪ (ಅರಶಿಣಗೋಡ) ಹಳ್ಳಕ್ಕೆ ಕಿಂಡಿ ಆಣೆಕಟ್ಟು ನಿರ್ಮಾಣದ ಭೂಮಿ ಪೂಜೆ, 3-30 ಕ್ಕೆ ವಾಜಗೋಡ ಪಂ. ಕಸ ವಿಲೇವಾರಿ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಗೇರಿ ಪಾಲ್ಗೊಳ್ಳಲಿದ್ದಾರೆ.

300x250 AD

ಸಂಜೆ 4-00ಕ್ಕೆ ದಾನಮಾಂವ ಶಂಕರ ನಾರಾಯಣ ಹೆಗಡೆ ಇವರ ತೋಟಕ್ಕೆ ಭೇಟಿ ನೀಡಿ,ಅಡಿಕೆ ಬೆಳೆಯ ಎಲೆ ಚುಕ್ಕಿ ರೋಗದ ಬಗ್ಗೆ ಪರಿವೀಕ್ಷಣೆ ನಡೆಸುವರು. 4-30 ಕ್ಕೆ ವಾಜಗೋಡಿನ ಕಳ್ಳೆಗದ್ದೆ ಸೇತುವೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನಡೆಸಲಿದ್ದು, ವಾಜಗೋಡಿನ ಲಂಬಾಪುರ ನೂತನ ಅಂಗನವಾಡಿ ಕಟ್ಟಡದ ಉದ್ಘಾಟನೆ ನೆರವೇರಿಸುವರು. ಸಂಜೆ 5-30 ಕ್ಕೆ ಬಿಳಗಿಯ ನೂತನ ಅಂಗನವಾಡಿ ಕಟ್ಟಡದ ಉದ್ಘಾಟನೆ ನೆರವೇರಿಸುವರು ಎಂದು ಶಾಸಕರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top