• Slide
    Slide
    Slide
    previous arrow
    next arrow
  • ಘನತಾಜ್ಯ ನಿರ್ವಹಣೆ ಇಂದು ಸವಾಲಾಗುತ್ತಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

    300x250 AD

    ಶಿರಸಿ: ಘನತ್ಯಾಜ್ಯ ಘಟಕಗಳಲ್ಲಿನ ಹಳೆಯ ತ್ಯಾಜ್ಯ (ಲೆಗೆಸ್ಸಿ) ನಿರ್ವಹಣೆ ಇಂದಿನ ಅನಿವಾರ್ಯತೆಯಾಗಿದೆ. ಇಂದು ಘನತ್ಯಾಜ್ಯ ನಿರ್ವಹಣೆ ಸವಾಲಾಗುತ್ತಿದೆ. ಪಾರಂಪರಿಕವಾಗಿ ಸಂಗ್ರಹಗೊಂಡ ತ್ಯಾಜ್ಯ ನಿರ್ವಹಣೆಯೇ ಸಮಸ್ಯೆಯಾಗಿ ಕಾಡುತ್ತಿದೆ. ಇದರಿಂದ ಜಾಗದ ಕೊರತೆ ಜತೆ ಪರಿಸರದ ಮೇಲೂ ಹಾನಿಯಾಗುತ್ತಿದೆ. ಕಾರಣ ಇಂಥ ತ್ಯಾಜ್ಯ ಮೊದಲು ಸಂಸ್ಕರಿಸಬೇಕು. ಇಂಥ ಸಂದರ್ಭದಲ್ಲಿ ನಗರಾಡಳಿತದ ಜವಾಬ್ದಾರಿ ಹೆಚ್ಚಿದೆ. ಸೌಲಭ್ಯ ಹೆಚ್ಚಿಸಿಕೊಂಡು ನಗರ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

    ಶಿರಸಿ ನಗರಸಭೆಗೆ ಅಮೃತ ನಿರ್ಮಲ ಯೋಜನೆ,14 ಮತ್ತು 15ನೇ ಹಣಕಾಸು ಯೋಜನೆ ಅಡಿಯಲ್ಲಿ ಖರೀದಿಸಿರುವ ಯಂತ್ರೋಪಕರಣಗಳು ಹಾಗೂ ನಗರಸಭೆ ನಿಧಿಯಡಿ ನಿರ್ಮಿಸಿದ ತೆರಿಗೆ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು ನಗರಸಭೆಗೆ ಸರ್ಕಾರ ನೀಡುವ ಸೌಲಭ್ಯದ ಸದ್ಬಳಕೆ ಆಗುತ್ತಿಲ್ಲ. ಹೀಗಾಗಿ ಸ್ವಚ್ಛತೆಯಲ್ಲಿ ಹಿನ್ನಡೆಯಾಗುತ್ತಿದೆ. ಸರ್ಕಾರಿ ಸೌಲಭ್ಯದ ಫಲ ಜನತೆಗೆ ತಲುಪುತ್ತಿಲ್ಲ. ಕೋಟ್ಯಂತರ ರೂಪಾಯಿ ವಸ್ತುಗಳು ತುಕ್ಕು ಹಿಡಿಯುತ್ತಿವೆ. ಈ ವ್ಯವಸ್ಥೆ ಬದಲಾಗುವ ಅಗತ್ಯವಿದೆ ಎಂದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಅಮೃತ ನಿರ್ಮಲ ಯೋಜನೆಯಡಿ ವಿಶೇಷ ಅನುದಾನ 7 ಕೋಟಿ ರೂ, ನೀರು ಸರಬರಾಜಿಗೆ 21.50 ಕೋಟಿ ರೂ, ನಗರೋತ್ಥಾನದಡಿ 2 ಕೋಟಿ ರೂ. ವಿಶೇಷ ಅನುದಾನ, 15 ನೇ ಹಣಕಾಸಿನಡಿ 2.82ಕೋಟಿ ರೂ., ರಸ್ತೆ ಸೌಲಭ್ಯಕ್ಕಾಗಿ 1.82 ಕೋಟಿ ರೂ. ಹೆಚ್ಚುವರಿಯಾಗಿ ಸರ್ಕಾರ ಬಿಡುಗಡೆ ಮಾಡಿದೆ ಎಂದರು.

    ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರತಿ ಮನೆಯಿಂದ ಕಸ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದ ಅವರು, ನಗರದಂಚಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿ 5 ಕೋಟಿ ರೂ. ಬಿಡುಗಡೆ ಮಾಡುವಂತೆ ಪ್ರಸ್ತಾವ ನೀಡಲಾಗುವುದು ಎಂದರು.

    300x250 AD

    ಕಾರ್ಯಕ್ರಮದಲ್ಲಿ ಅಮೃತ ನಿರ್ಮಲ ನಗರ ಯೋಜನೆಯಡಿಯಲ್ಲಿ ಖರೀದಿಸಿದ ಹಸಿ ತ್ಯಾಜ್ಯ ಸಂಸ್ಕರಣೆಗೆ ವರ್ಮಿ ರೆಡಿ ಬಿನ್ಸ್ 5, ಚಿಕನ್ ವೇಸ್ಟ್ ಸಂಸ್ಕರಣೆಗೆ ಬ್ರೆಡ್ಡರ್ 1 ಹಾಗೂ ಎಫ್.ಆರ್.ಪಿ. ಬಿನ್ಸ್ 5 ಯಂತ್ರಗಳನ್ನು, ಸಂಸ್ಕರಿಸಿದ ಕೊಳಚೆ ನೀರು ಸುನರ್ ಬಳಕೆಗಾಗಿ ಪಂಪ್ ಹೊಂದಿದ ಟೇಲರ್ ಮೇಲಿನ ಟ್ಯಾಂಕರ 2, ಮಹಿಳಾ ಶೌಚಾಲಯಗಳಲ್ಲಿ ನ್ಯಾಪಿನ್ ವೆಂಡಿಂಗ್ 4 ಮತ್ತು ನಗರಸಭಾ ನಿಧಿಯಡಿ ತೆರಿಗೆ ಶಾಖೆಯ ಕಟ್ಟಡ 12.66 ಲಕ್ಷ ರೂ. ವೆಚ್ಚದಲ್ಲಿ, 14ನೇ ಹಣಕಾಸು ಯೋಜನೆಯಡಿ ಜೆಟ್ಟಿಂಗ್ ವಾಹನ 1, 15 ಹಣಕಾಸು ಯೋಜನೆಯಡಿ 8 ಆಟೋ ಟಿಪ್ಪರ್ ಗಳಿಗೆ ಚಾಲನೆ ನೀಡಲಾಯಿತು.

    ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ, ಪೌರಾಯುಕ್ತ ಕೇಶವ ಚೌಗಲೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ಪರಿಸರ ಇಂಜಿನಿಯರ್ ನಾರಾಯಣ ನಾಯಕ, ನಗರಸಭೆ ಎಇಇ ಪ್ರಶಾಂತ ವೇರ್ಣೆಕರ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top