Slide
Slide
Slide
previous arrow
next arrow

ನ.19 ಡ್ಯಾನ್ಸ್ ಸ್ಪರ್ಧೆ, ಕಬ್ಬಡಿ ಪಂದ್ಯಾವಳಿ ಆಯೋಜನೆ

300x250 AD

ಸಿದ್ದಾಪುರ: ತಾಲೂಕಾ ಕ್ರೀಡಾಂಗಣದಲ್ಲಿ ನ. 19 ರ ಶನಿವಾರ ಸಾಯಂಕಾಲ ಸಿದ್ಧಾಪುರದ ಅಪ್ಪು ಡಾನ್ಸ್ ಟ್ರೋಫಿ ನೃತ್ಯ ಸ್ಫರ್ಧೆ ಮತ್ತು ಮ್ಯಾಟ್ ಕಬ್ಬಡ್ಡಿಯ ಸಮಾಜಮುಖಿ ಟ್ರೋಫಿಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ನಡೆಯಲಿವೆ.

ಸುಮಾರು ಎರಡು ದಶಕಗಳಿಂದ ಸಾಮಾಜಿಕ, ಪರಿಸರ, ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಾ ಸಮಾಜಮುಖಿಯಾಗಿರುವ ಸಮಾಜಮುಖಿ.ನೆಟ್ ಸಂಸ್ಥೆ ಕನಸು ಸೇವಾ ಸಂಸ್ಥೆಯೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿದೆ. ಇದೇ ಮೊದಲ ಬಾರಿ ಸಾಂಸ್ಕೃತಿಕ ಅಭಿವೃದ್ಧಿ ಚಿಂತನೆಯ ಜೊತೆಗೆ ಕ್ರೀಡಾ ಚಟುವಟಿಕೆ ನಡೆಸುತ್ತಿರುವ ಈ ಸಂಸ್ಥೆ ಯೋಜಿಸಿರುವ ಪಂದ್ಯಾಟದ ಪ್ರಚಾರ ಸಾಮಗ್ರಿಗಳನ್ನು ನಗರದ ಪದ್ಮರಾಜ್ ಜ್ಯುವೆಲ್ಲರಿಯಲ್ಲಿ ಗಣಪತಿ ಶೇಟ್ ಮತ್ತು ನಿವೃತ್ತ ಕೃಷಿ ಸಹಾಯಕ ಐ. ಕೆ. ನಾಯ್ಕ ಗೋಳಗೋಡ್ ಬಿಡುಗಡೆ ಮಾಡಿದರು.

300x250 AD

ಸಮಾಜಮುಖಿ ಸಂಸ್ಥೆ ಮಲೆನಾಡಿನ ಜನಜೀವನದ ರಾಯಭಾರಿಯಾಗಿದ್ದು ಕಳೆದ ಎರಡು ದಶಕಗಳಿಂದ ಸಮಾಜಮುಖಿ ರಾಜಿಯಿಲ್ಲದ ಸಾಮಾಜಿಕ ಜಾಗೃತಿಯ ಹೋರಾಟ ನಡೆಸುತ್ತಿರುವುದಕ್ಕೆ ಅಭಿನಂದಿಸಿದರು.

Share This
300x250 AD
300x250 AD
300x250 AD
Back to top