• Slide
    Slide
    Slide
    previous arrow
    next arrow
  • ಸ್ವಪ್ರತಿಷ್ಟೆಯಿಂದ ಮಾಡಿದ ಸುಳ್ಳು ಆರೋಪದಲ್ಲಿ ಯಾವುದೇ ಹುರುಳಿಲ್ಲ: ಗೀತಾ ಆಲೂರ್

    300x250 AD

    ಶಿರಸಿ: ಸ್ವಪ್ರತಿಷ್ಟೆಯಿಂದ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು, ಸದಸ್ಯರು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಾಲೂಕಿನ ಬದನಗೋಡ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಗೀತಾ ಆಲೂರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಎಲ್ಲಾ ಪಂಚಾಯತಿಗಳಿಗೂ ಬರುವ ಅನುದಾನದಂತೆ ನಮ್ಮ ಪಂಚಾಯಿತಿಗೂ ಅನುದಾನ ಬಂದಿದ್ದು, ಬಂದ ಅನುದಾನದಲ್ಲಿ 21 ವಾರ್ಡಗಳಿಗೂ ಸಮಾನಾಗಿ ಹಂಚಿಕೆಮಾಡಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಆದರೆ ಕೆಲ ಸದಸ್ಯರು ಸುಮ್ಮನೇ ತನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

    ನನ್ನ ಮೇಲಿನ ವೈಯಕ್ತಿಕ ದ್ವೇಶಕ್ಕೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಸುಳ್ಳು ಆರೋಪ ಮಾಡುವವರಿಗೆ ಒಂದು ಹೆಣ್ಣು ಅಧ್ಯಕ್ಷೆಯಾಗಿರುವದನ್ನು ಸಹಿಸುತ್ತಿಲ್ಲ. ಅವರಿಗೆ ಇನ್ಯಾವುದೋ ಉದ್ದೇಶಕ್ಕೆ ಇನ್ಯಾರೋ ಅಧ್ಯಕ್ಷವಾಗಬೇಕಿದೆ. ಅದಕ್ಕಾಗಿ ಅವರು ಸದಸ್ಯರ ಸುಳ್ಳು ಸಹಿ ಹಾಕಿಸಿ ಅವಿಶ್ವಾಸ ಮತಕ್ಕೆ ಅವಕಾಶ ನೀಡಲು ಅದಿಕಾರಿಗಳ ಬಳಿ ಹೋಗಿದ್ದರು. ಆದರೆ ಅದು ಅವರಿಂದ ಸಾದ್ಯವಾಗಲಿಲ್ಲ ಎಂದಿದ್ದಾರೆ.

    ಸಚಿವ ಶಿವರಾಮ ಹೆಬ್ಬಾರವರು ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಅನುದಾನ ನೀಡುತ್ತಿದ್ದಾರೆ. ಇದರಿಂದ ಎಲ್ಲಾ ಕೆಲಸಗಳು ಸಾಂಗಿಕವಾಗಿ ನಡೆಯುತ್ತಿದೆ. 14 ನೇ ಹಣಕಾಸಿನ ಕಾಮಗಾರಿಗಳು ಮುಗಿದಿದ್ದು, 15 ನೇ ಹಣಕಾಸಿನ ಕಾಮಗಾರಿಗಳು ಚಾಲ್ತಿಯಲ್ಲಿದ್ದು ಮಳೆಯಿಂದಾಗಿ ಇದು ನಿಂತಿದೆ. ನಮಗೆ ಗೊಮಾಳಕ್ಕಾಗಿ ಸರಕಾರಿ ಪಡಯಿಲ್ಲ. ಇದರ ಬಗ್ಗೆ ಚರ್ಚೆಮಾಡಲು ವಿರೋದಮಾಡುವವರು ಮುಂದೆ ಬರುತ್ತಿಲ್ಲ ಎಂದಿದ್ದಾರೆ.

    300x250 AD

    ಅಭಿವೃದ್ಧಿ ಕೆಲಸವಾಗಿಲ್ಲ ಎನ್ನುವವರು ಸಭೆಯಲ್ಲಿ ಕುಳಿತು ಈ ಬಗ್ಗೆ ಚರ್ಚೆ ಮಾಡಬೇಕು. ಬದಲಾಗಿ ಸಣ್ಣಸಣ್ಣ ವಿಷಯಕ್ಕಾಗಿ ವಾದಮಾಡುತ್ತ ಕಾಲ ಕಳೆಯುತ್ತಾರೆ. ನಿನ್ನೆ ಕೂಡಾ 11 ಸದಸ್ಯರು ಸೇರಿ ಸಭೆ ಮಾಡುತ್ತಿದ್ದ ಸಂದರ್ಭದಲ್ಲಿ ಕೆಲ ಸದಸ್ಯರು ಬಂದು ಸದಸ್ಯರು ಮಾಡಿದ ಸಹಿಯನ್ನು ತಿದ್ದುಕಾಟುಮಾಡಿ ಅವರನ್ನು ಹೊರಗೆ ಕರೆದುಕೊಂಡು ಹೋದರು. ಹಿಂದಿನ ಅಧ್ಯಕ್ಷರಿಗೂ ಕೂಡಾ ಇದೇ ರೀತಿಯಾಗಿ ತೊಂದರೆ ಕೊಡುತ್ತಲೆ ಬಂದವರು ಈಗಲೂ ಕೂಡಾ ಅದೇ ಸದಸ್ಯರು ನಮಗೆ ತೊಂದರೆ ಕೊಡುತ್ತಿದ್ದಾರೆಂದರು.

    ಸುದ್ದಿಗೋಷ್ಠಿಯಲ್ಲಿ ಸದಸ್ಯರುಗಳಾದ ಅಕ್ಷಯ ಜಕಲಣ್ಣನವರ್, ಮೆಹಬೂಬ್ ಅಲಿ ವರದಿ, ರಕ್ಷಿತಾ ರಾಮಾಪುರ, ಸಿದ್ದಲಿಂಗ ಶಾಂತಪ್ಪ ಗೌಡ್ರು, ರೇಣುಕಾ ಭೊವಿವಡ್ಡರ್,ಮಾದೇವಕ್ಕ ಮಡಿವಾಳ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top