• Slide
  Slide
  Slide
  previous arrow
  next arrow
 • ಬಸ್ ತಂದುಗಾಣ ನಿರ್ಮಿಸದೆ ಐಆರ್‌ಬಿಯಿಂದ ಅನ್ಯಾಯ: ತಳೇಕರ

  300x250 AD

  ಕಾರವಾರ: ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮುದಗಾ ಅಮದಳ್ಳಿ ಪೋಸ್ಟ್ ಚಂಡಿಯಾ ಆರು ಮೈಲ್(ಚಂಡಿಯಾ)ಆಯ್ಸಫೆಕ್ಟರಿ ಚಂಡಿಯಾ ಅರಗಾ ತನಕ ನಾಲ್ಕು ವರ್ಷದಿಂದ ಐಆರ್‌ಬಿ ಕಂಪನಿ ಪ್ರಯಾಣಿಕರಿಗೆ ಬಸ್ಸ ತಂಗುದಾಣ ಮಾಡದೆ ಸಾರ್ವಜನಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ನರೇಂದ್ರ ಆರ್ ತಳೇಕರ ಆರೋಪಿಸಿದ್ದಾರೆ.

  ವಯೋವೃದ್ದರು ಶಾಲಾ ಕಾಲೇಜು ಮಕ್ಕಳಿಗೆ ಮಳೆ ಬಿಸಿಲಿನಲ್ಲಿ ನಿಲ್ಲುವ ಭಾಗ್ಯ ನೀಡಿದ ಆಯ್ ಆರ್ ಬಿ ಕಂಪನಿ. ಅಮದಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲಾ ಮಕ್ಕಳು ಮತ್ತು ಇಲ್ಲಿಯ ಜನರು ರಸ್ತೆ ದಾಟುವಾಗ ಎರಡು ಕಡೆಯಿಂದ ವೇಗವಾಗಿ ಬರುವ ವಾಹನಗಳಿಂದ. ಭಯಭೀತರಾಗಿ ರಸ್ತೆ ದಾಟುವ ಪರಿಸ್ಥಿತಿ ಎದುರಾಗಿದೆ ಅಮದಳ್ಳಿಯ ಮೀನು ಮಾರುಕಟ್ಟೆ ರಸ್ತೆ ಕಂತ್ರಿವಾಡಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಟ ವ್ಯವಸ್ಥೆಯನ್ನು ಕೂಡ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ ಆದ್ದರಿಂದ ಇ ಎಲ್ಲಾ ತೊಂದರೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಿಲ್ಲವಾದರೆ ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಶಾಲಾ ಕಾಲೇಜು ಮಕ್ಕಳ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top