Slide
Slide
Slide
previous arrow
next arrow

ವಿದ್ಯಾದಾನಕ್ಕಿಂತ ಮಿಗಿಲಾದ ದಾನವಿಲ್ಲ: ಫಾಲ್ಗುಣ ಗೌಡ

300x250 AD

ಅಂಕೋಲಾ: ವಿದ್ಯಾದಾನಕ್ಕಿಂತ ಮಿಗಿಲಾದ ದಾನವಿಲ್ಲ. ವಿದ್ಯಾರ್ಥಿಯನ್ನು ಪ್ರೀತಿಸಿ ಪ್ರೋತ್ಸಾಹಿಸುವ ಶಿಕ್ಷಕ ತನಗರಿವಿಲ್ಲದಂತೆ ಎತ್ತರಕ್ಕೆ ಬೆಳೆಯುತ್ತಾನೆ. ತನ್ನ ವಿದ್ಯಾರ್ಥಿಗಳ ಯಶಸ್ಸೇ ಆತನ ಅಭಿಲಾಶೆಯಾಗಿರುತ್ತದೆ ಎಂದು ಪಿಎಂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ಹೇಳಿದರು.

ಪಟ್ಟಣದ ಕಲ್ಪವೃಕ್ಷ ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಪೊಲೀಸ್ ನೇಮಕಾತಿಯ ಉಚಿತ ಕಾರ್ಯಗಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ವಿದ್ಯಾರ್ಥಿಗಳು ಪಿಯುಸಿ ಹಂತದಲ್ಲಿಯೆ ಸ್ಪರ್ಧಾತ್ಮಕ ಪರೀಕ್ಷೆಯತ್ತ ಗಮನಹರಿಸಬೇಕು. ಶೈಕ್ಷಣಿಕ ಪಠ್ಯಕ್ರಮದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮಗಳ ಅರಿವು ಹೊಂದಿರಬೇಕು. ಯಶಸ್ಸಿನ ರೂಪದಲ್ಲಿ ಪ್ರತಿಫಲವಾಗಿ ದೊರೆಯುವ ಸಾಧನೆಗೆ ನಿರಂತರ ಪರಿಶ್ರಮ ಅಗತ್ಯ. ಸ್ಪರ್ಧಾರ್ಥಿಗಳ ಶ್ರೇಯೋಭಿವೃದ್ಧಿಗೆ ಉಚಿತವಾಗಿ ಒಂದು ವಾರ ತರಬೇತಿ ನೀಡಿರುವುದು ಕಲ್ಪವೃಕ್ಷ ಸಂಸ್ಥೆಯ ಔದಾರ್ಯವಾಗಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅರುಣ ಶೆಟ್ಟಿ ಮಾತನಾಡಿ, ತಾಲ್ಲೂಕಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕಲ್ಪವೃಕ್ಷ ಸಂಸ್ಥೆ ಹೊಸ ಭರವಸೆಯನ್ನು ಒದಗಿಸಿದೆ. ಒಂದು ವರ್ಷದಲ್ಲಿ ಎಂಟು ಬಾರಿ ಉಚಿತ ಕಾರ್ಯಗಾರಗಳನ್ನು ನಡೆಸಿರುವುದು ಶ್ಲಾಘನೀಯ. ಉಪನ್ಯಾಸಕರ ಪರಿಶ್ರಮ ಸ್ಪರ್ಧಾರ್ಥಿಗಳ ಸಾಧನೆಗೆ ಮೂಲ ಕಾರಣ ಎಂದರು.

300x250 AD

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲ್ಪವೃಕ್ಷ ಸಂಸ್ಥೆಯ ಮಾರ್ಗದರ್ಶಕ ಸುಧಾಕರ ಕಟ್ಟೆಮನೆ, ಯಶಸ್ಸು ಕೇವಲ ಒಂದು ದಿನದ ಕನಸಲ್ಲ. ಅವಿರತ ಪ್ರಯತ್ನದ ಫಲವಾಗಿದೆ. ಒಂದು ವಾರ ವಿಷಯಗಳ ಕುರಿತು ಸಮಗ್ರವಾಗಿ ತರಬೇತಿ ನೀಡಲಾಗಿದೆ ಎಂದರು.

ಪತ್ರಕರ್ತ ಅಕ್ಷಯಕುಮಾರ ನಾಯ್ಕ ವೇದಿಕೆಯಲ್ಲಿದ್ದರು. ಉಪನ್ಯಾಸಕ ರವಿ ಎನ್, ಕಾರ್ಯಕ್ರಮ ನಿರೂಪಿಸಿದರು. ಕಲ್ಪವೃಕ್ಷ ಸಂಸ್ಥೆಯ ನಿರ್ದೇಶಕ ಮಾರುತಿ ಹರಿಕಂತ್ರ ಪ್ರಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ಮತ್ತು ತರಬೇತಿಯ ಉದ್ದೇಶ, ಗುರಿ ಹಾಗೂ ರೂಪುರೇಷೆಗಳ ಬಗ್ಗೆ ವಿವರಿಸಿದರು. ಸ್ಪರ್ಧಾರ್ಥಿಗಳಾದ ಭಾರ್ಗವಿ ನಾಯಕ, ನಾಗಲಕ್ಷ್ಮಿ, ಅನಿಲ ಗೌಡ, ರಶ್ಮಿ ಕುಮಟಾ ಶಿಬಿರದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

Share This
300x250 AD
300x250 AD
300x250 AD
Back to top