• Slide
  Slide
  Slide
  previous arrow
  next arrow
 • ‘ಕೋಟಿ ಕಂಠ ಗೀತ ಗಾಯನ’ ವಿಶೇಷ ಕಾರ್ಯಕ್ರಮ

  300x250 AD

  ಕಾರವಾರ: ಸರ್ಕಾರದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ‘ಕೋಟಿ ಕಂಠ ಗೀತ ಗಾಯನ’ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

  ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ 4 ಲಕ್ಷ ಜನರನ್ನು ಭಾಗಿಯಾಗಿಸಲು ಉದ್ದೇಶಿಸಲಾಗಿದ್ದು, ಸಮೂಹ ಗೀತ ಗಾಯನವನ್ನು ಅಕ್ಟೋಬರ್ 28 ರ ಶುಕ್ರವಾರ ಬೆಳ್ಳಿಗೆ 11 ಗಂಟೆಗೆ ತಾಲ್ಲೂಕಿನ ರವೀಂದ್ರನಾಥ ಟ್ಯಾಗೋರ್ ಕಡಲತೀರ ಹಾಗೂ ಕುಮಟಾ ತಾಲೂಕಿನ ಮಿರ್ಜಾನ ಕೋಟೆ ಮತ್ತು ಬನವಾಸಿ ಆಯ್ದ ಸ್ಥಳಗಳಲ್ಲಿ ನಾಡು ನುಡಿಯ ಶ್ರೇಷ್ಠತೆಯನ್ನು ಸಾರುವ ನಾಡಗೀತೆ, ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ರಾಷ್ಟ್ರಕವಿ ಕುವೆಂಪು ರವರ ಬಾರಿಸು ಕನ್ನಡ ಡಿಂಡಿಮವ, ಡಾ.ಡಿ.ಎಸ್. ಕರ್ಕಿಯವರ ಹಚ್ಚೇವು ಕನ್ನಡದ ದೀಪ, ನಾಡೋಜ ಡಾ. ಚನ್ನವೀರ ಕಣವಿಯವರ ವಿಶ್ವವಿನೂತನ ವಿದ್ಯಾಚೇತನ, ಡಾ. ಹಂಸಲೇಖ ರವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಏಕ ಕಾಲದಲ್ಲಿ ಹಾಡುವುದು. ಉಳಿದ ತಾಲೂಕುಗಳಲ್ಲಿ ಆಯಾ ತಾಲೂಕಿನ ತಹಶೀಲ್ದಾರ ಹಾಗೂ ಉಪ ವಿಭಾಗಾಧಿಕಾರಿಗಳಿಂದ ಕಾರ್ಯಕ್ರಮ ನೇರವೆರಿಸಲು ಸೂಚಿಸಲಾಗಿದೆ.

  300x250 AD

  ಮೇಲಿನ ಹಾಡುಗಳ ಸಾಹಿತ್ಯ ಹಾಗೂ ಧಾಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯುಟ್ಯೂಬ್ ಚಾನೆಲ್https://bit.ly/3rVBi7t ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಆಸಕ್ತ ಕೋಟಿ ಕಂಠ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವವರು https://bit.ly/3MwNncI ಲಿಂಕ್ ಮೂಲಕ ಅಕ್ಟೋಬರ್ 11 ರಿಂದ 28 ರವರೆಗೆ ಹೆಸರು ನೊಂದಾಯಿಸಿಕೊಳ್ಳಬಹುದು. ಅಭಿಯನದಲ್ಲಿ ಭಾಗವಹಿಸಿದವರಿಗೆ ಸ್ವಯಂಚಾಲಿತ ಆನ್‌ಲೈನ್ ಪುಮಾಣಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9900824099 ಗೆ ಸಂಪರ್ಕಿಸಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top