• Slide
  Slide
  Slide
  previous arrow
  next arrow
 • ಹೋರಾಟ ಅನಿವಾರ್ಯ, ಜೀವ ಬೇಕಾದರೂ ಬಿಟ್ಟೆವು, ಭೂಮಿ ಬಿಡೆವು

  300x250 AD

  ಸಿದ್ಧಾಪುರ: ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ಅನಿವಾರ್ಯ, ಪರಿಣಾಮಕಾರಿಯಾದ ಹೋರಾಟ ಮುಂದುವರೆಸಲು ತೀರ್ಮಾನಿಸಿ, ಜೀವವಾದರೂ ಬಿಟ್ಟೆವು ಭೂಮಿಯಿಂದ ಎದ್ದೇಳಲು ಸಾಧ್ಯವಿಲ್ಲ ಎಂಬ ತೀರ್ಮಾನಗಳನ್ನು ಅರಣ್ಯವಾಸಿಗಳು ಕೈಗೊಂಡರು.

  ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಅ.19 ರಂದು ಬಿಳಗಿಯಿಂದ ಸಿದ್ಧಾಪುರದವರೆಗೆ 14 ಕೀ.ಮೀ ನ ಬೃಹತ್ ಜಾಥ ಮತ್ತು ರ‍್ಯಾಲಿ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಹಲಗೇರಿ, ವಾಜಗೋಡ, ಇಟಗಿ, ಕ್ಯಾದಗಿ, ಬಿಳಗಿ, ತ್ಯಾಗಲಿ, ಕಾನಸೂರ, ಹಸರಗೋಡ, ಹಾರ್ಸಿಕಟ್ಟಾ ಮುಂತಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜರುಗಿದ ಸಭೆಯಲ್ಲಿ ಅತಿಕ್ರಮಣದಾರರು ತೀರ್ಮಾನಿಸಿದರು.
    ಅರಣ್ಯ ಅತಿಕ್ರಮಣದಾರರಿಗೆ ಮಂಜೂರಿಗೆ ಸಂಬಂಧಪಟ್ಟಅಂತೆ ಸರಕಾರದ ನಿರ್ಲಕ್ಷ್ಯ, ಜನಪ್ರತಿನಿಧಗಳ ಇಚ್ಛಾಶಕ್ತಿ ಕೊರತೆ, ನಿರಂತರ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿಂದ  ಕಿರುಕುಳ, ದೌರ್ಜನ್ಯ, ಕಾನೂನು ಬಾಹಿರ ಕೃತ್ಯದ ಕುರಿತು ಅರಣ್ಯ ಅತಿಕ್ರಮಣದಾರರು ದೌರ್ಜನ್ಯದ ಕುರಿತು ಖಂಡಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top