ಸಿದ್ದಾಪುರ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ಆಹಾರ ಪರವಾನಿಗೆ ಹಾಗೂ ನೊಂದಣಿ ಆಂದೋಲನದಡಿಯಲ್ಲಿ ಇಲ್ಲಿಯ ತಾಲೂಕಾ ಪಂಚಾಯ್ತಿ ಸಭಾಭವನದಲ್ಲಿ ಮಹಿಳಾ ಉದ್ದಿಮೆದಾರರಿಗೆ ಗುಣಮಟ್ಟದ ಆಹಾರ ತಯಾರಿಕೆ ಕುರಿತು ಅರಿವು ಮೂಡಿಸಲಾಯಿತು.
ತಾಲೂಕಾ ಪಂಚಾಯತ ಸಹಾಯಕ ನಿರ್ದೇಶಕ ದಿನೇಶ್ ಇ.ಡಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಗುಣಮಟ್ಟದ ಆಹಾರ ತಯಾರಿಕೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಆಹಾರ ಸುರಕ್ಷತಾಧಿಕಾರಿ ಅರುಣ ಕಾಶಿ ಭಟ್ ಆಹಾರ ತಯಾರಿಕೆ ಕುರಿತು ಪ್ರೊಜೆಕ್ಟರ್ ಮೂಲಕ ಮಾಹಿತಿ ನೀಡಿ, ಆಹಾರ ತಯಾರಿಕೆಯಲ್ಲಿ ಶುಚಿತ್ವ ಹಾಗೂ ಗುಣಮಟ್ಟ ಕಾಯ್ದುಕೊಳ್ಳಬೇಕು. ಈ ವೇಳೆ ತಾ.ಪಂ ಯೋಜನಾಧಿಕಾರಿ ಬಸವರಾಜ, ಎನ್.ಆರ್.ಎಲ್.ಎಂನ ನರ್ತನಕುಮಾರ, ಮಾಲತಿ ನಾಯ್ಕ, ಮಾನಸಾ ಗೌಡ, ಉಷಾ ಮಠದಹಿತ್ಲು ಉಪಸ್ಥಿತರಿದ್ದರು.
ಆರ್ಥಿಕ ಸಾಕ್ಷರತಾ ಕಾರ್ಯಕ್ರಮ: ನಂತರ ನಡೆದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾ ಮಳವತ್ತಿ ಶಾಖೆಯ ಕ್ರೆಡಿಟ್ ಆಪೀಸರ್ ನರಸಿಂಹ ಹೆಗಡೆ ಆಧುನಿಕ ಸೌಲಭ್ಯಗಳು ಹಾಗೂ ಮೋಸದ ಜಾಲಗಳ ಕುರಿತು ಮಾಹಿತಿ ನೀಡಿದರು. ವಿಜಯ ಆರ್ಥಿಕ ಸಾಕ್ಷರತಾ ಸಮಾಲೋಚಕ ಶಿವಶಂಕರ ಎನ್. ಕೆ, ಖಾತೆಗಳ ನಿರ್ವಹಣೆ ಕುರಿತು ವಿವರಿಸಿದರು. ಈ ವೇಳೆ ಎನ್.ಆರ್.ಎಲ್.ಎಂನ ನರ್ತನಕುಮಾರ, ಮಾಲತಿ ನಾಯ್ಕ, ಆಹಾರ ಸುರಕ್ಷತಾಧಿಕಾರಿ ಅರುಣ ಕಾಶಿಭಟ್ ಉಪಸ್ಥಿತರಿದ್ದರು.