• Slide
  Slide
  Slide
  previous arrow
  next arrow
 • ಯಶಸ್ವಿಯಾಗಿ ನಡೆದ ಜಿಲ್ಲಾಮಟ್ಟದ ಯುವ ಉತ್ಸವ

  300x250 AD

  ಕಾರವಾರ: ನೆಹರು ಯುವ ಕೇಂದ್ರವು ನಮ್ಮ ಕಾರವಾರದ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಯುವ ಉತ್ಸವ 2022 ಅನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ನಡೆಸಿತು.
  ಜಿಲ್ಲೆಯ ವಿವಿಧೆಡೆಯಿಂದ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಚಿತ್ರಕಲೆ, ಕವನ, ಘೋಷಣೆ, ಮೊಬೈಲ್ ಛಾಯಾಗ್ರಹಣ, ಯುವ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು. ಜಿಲ್ಲಾ ಮಟ್ಟದ ವಿಜೇತರು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

  ಸ್ವಯಂಸೇವಕರಿಗೆ ಕೃತಜ್ಞತೆ: ನೆಹರು ಯುವ ಕೇಂದ್ರದ ಈ ಕಾರ್ಯಕ್ರಮದಲ್ಲಿ ನಮ್ಮ ಕಾರವಾರ ತಂಡ ಹೆಮ್ಮೆಯಿಂದ ಸಹಯೋಗ ನೀಡಿತ್ತು. ಸ್ವಯಂಸೇವಕರುಗಳಾದ ಅಶ್ವಿನ್ ಪಡವಳ್ಕರ್, ವರುಣ್ ನಾಯರ್, ಗಗನ್ ಗೋವೆಕರ್, ಅಮನ್ ರೇವಣಕರ್, ಅನುಷ್ ರೇವಣಕರ್, ವಾಸುದೇವ್ ಮೊಗೇರ್, ಲಕ್ಷಿತಾ ಅರ್ವಾಂಕರ್, ವೈಭವ್ ವೆರ್ಣೇಕರ್, ಶಿವಂ ನಾಯ್ಕ್, ಓಂ ದೇಸಾಯಿ, ಮೇಘನಾ ಭಟ್, ಪ್ರಕಾಶ ಭೋವಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಿದರು. ಕಾರ್ಯಕ್ರಮದ ಭಾಗವಾಗಿದ್ದ ಮತ್ತು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲರಿಗೂ ನಮ್ಮ ಕಾರವಾರ ತಂಡದ ನಿರ್ವಾಹಕ ಸ್ವರೂಪ ತಳೇಕರ್ ಹಾಗೂ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಯಶವಂತ್ ಯಾದವ್ ಧನ್ಯವಾದ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top