• Slide
  Slide
  Slide
  previous arrow
  next arrow
 • ಕೋಲಶಿರ್ಸಿ ಗ್ರಾ.ಪಂ ಅಧ್ಯಕ್ಷೆಯಾಗಿ ಮಮತಾ ಮಡಿವಾಳ

  300x250 AD

  ಸಿದ್ದಾಪುರ: ತಾಲೂಕಿನ ಕೋಲಶಿರ್ಸಿ ಗ್ರಾಮ ಪಂಚಾಯತ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಮಮತಾ ಮಡಿವಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಗ್ರಾಮ ಪಂಚಾಯತದಲ್ಲಿ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರು ಆಯ್ಕೆಯಾಗಿದ್ದಾರೆ.
  ಗೊತ್ತುಪಡಿಸಿದ ಚುನಾವಣಾಧಿಕಾರಿ ಎ.ಪಿ.ಎಂ.ಸಿ ಕಾರ್ಯದರ್ಶಿ ಮಂಗೇಶ ಜಿ.ನಾಯ್ಕ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಪಂಚಾಯತದ ಉಪಾಧ್ಯಕ್ಷರಾದ ವಿನಾಯಕ ಕೆ.ಆರ್, ನಿಕಟಪೂರ್ವ ಅಧ್ಯಕ್ಷೆ ಶ್ವೇತಾ ಆರ್.ನಾಯ್ಕ ಸದಸ್ಯರುಗಳಾದ ಗಣಪತಿ ಜೆ.ಗೊಂಡ ಮಡ್ಲಿಕೊಪ್ಪ, ಗೋವಿಂದ ಬಿ.ನಾಯ್ಕ, ವಿನಯ ಗೌಡರ್ ಕುಣಜಿ, ವೀಣಾ ಕಾನಡೆ, ಹೇಮಾ ಸಿ.ಗೌಡರ್, ಮಮತಾ ಎಸ್.ಮಡಿವಾಳ, ಮಹಾಬಲೇಶ್ವರ ಆರ್.ನಾಯ್ಕ, ಆನಂದ ಮಡಿವಾಳ ಕುಣಜಿ, ದುರ್ಗಮ್ಮ ಮೇದಾರ, ಸುಮಾ ಎನ್.ನಾಯ್ಕ, ತಿಲಕಕುಮಾರ ಉಪಸ್ಥಿತರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
  ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ ಕಾರ್ಯದರ್ಶಿಗಳು, ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಈ ಸಂದರ್ಭಲ್ಲಿ ಹಾಜರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top