• Slide
  Slide
  Slide
  previous arrow
  next arrow
 • ವಿಮಲಾ ಕ್ರಿಮ್ಸ್ ನಿರ್ದೇಶಕರ ಭೇಟಿಯಾದ ಐಎನ್‌ಎಚ್‌ಎಸ್ ಪತಂಜಲಿ ತಂಡ

  300x250 AD

  ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅರಗಾದ ಭಾರತೀಯ ನೌಕಾಪಡೆಯ ಆಸ್ಪತ್ರೆ ಪತಂಜಲಿಯ ಅಧಿಕಾರಿಗಳು ಭೇಟಿ ನೀಡಿ, ನಿರ್ದೇಶಕರೊಂದಿಗೆ ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸಿದರು.
  ಹೊಸದಾಗಿ ನಿಯುಕ್ತಿಯಾದ ಐಎನ್‌ಎಚ್‌ಎಸ್ ಪತಂಜಲಿಯ ಕಮಾಂಡಿಂಗ್ ಆಫೀಸರ್ ರಾಜೀವ್ ಶಿವಶಂಕರ್, ಪ್ಯಾಥೋಲಜಿ ವಿಭಾಗದ ಮುಖ್ಯಸ್ಥ ರಿನಿ ಮ್ಯಾಥ್ಯೂವ್ಸ್, ಸರ್ಜರಿ ವಿಭಾಗದ ಮುಖ್ಯಸ್ಥ ಅಭಿಷೇಕ ದಾಸ್ ಕ್ರಿಮ್ಸ್ಗೆ ಭೇಟಿ ನೀಡಿ, ಮುಂದಿನ ದಿನಗಳಲ್ಲಿ ಸಂಸ್ಥೆಯೊಂದಿಗೆ ಜಂಟಿ ಸದಸ್ಯರಾಗಿ ಅಕಾಡೆಮಿಕ್ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಸಂಸ್ಥೆಯ ಜೊತೆ ಜನತೆಗೆ ಆರೋಗ್ಯದ ಸೌಲಭ್ಯಗಳನ್ನು ಒದಗಿಸಲು ಸಹಕಾರ ನೀಡುತ್ತೇವೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ಅವರಿಗೆ ತಿಳಿಸಿದರು. ಇದೇ ವೇಳೆ ಕ್ರಿಮ್ಸ್ ವೈದ್ಯ ಸಿಬ್ಬಂದಿಗಳ ಜೊತೆ ಚರ್ಚಿಸಿದರು.
  ಈ ಸಂದರ್ಭದಲ್ಲಿ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಭಟ್, ಸಹ ಪ್ರಾಧ್ಯಾಪಕರುಗಳಾದ ಡಾ.ಪ್ರಕಾಶ ಎಚ್.ಎಂ., ಡಾ.ನವೀನ ಹವಳೆ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಹರೀಶ ನಾಯ್ಕ, ಡಾ.ಮಹಾಲಕ್ಷೀ, ಡಾ.ಶ್ರೀನಿವಾಸ ಇನ್ನಿತರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top