• Slide
  Slide
  Slide
  previous arrow
  next arrow
 • ಭಾರತ ಐಕ್ಯತಾ ಪಾದಯಾತ್ರೆಯಲ್ಲಿ ಶಾರದಾ ಶೆಟ್ಟಿ ಟೀಂ

  300x250 AD

  ಕುಮಟಾ: ಚಿತ್ರದುರ್ಗದ ಚಳ್ಳಕೆರೆಯಲ್ಲಿ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಪಾದಯಾತ್ರೆಯಲ್ಲಿ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಶೆಟ್ಟಿ ಕಾಂಗ್ರೆಸ್ ಮುಖಂಡರ ಜೊತೆಗೆ ಹೆಜ್ಜೆ ಹಾಕಿದರು.
  ಮೊದಲು ರಾಜ್ಯ ಕಾಂಗ್ರೆಸ್ ನಾಯಕರನ್ನು ಭೇಟಿಯಾದ ಮಾಜಿ ಅವರು, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ ಹಾಗೂ ಇತರ ಮುಖಂಡರ ಜೊತೆ ಕುಮಟಾ- ಹೊನ್ನಾವರ ಕ್ಷೇತ್ರದಿಂದ ಪಾಲ್ಗೊಂಡ ಸಾವಿರಾರು ಕಾರ್ಯಕರ್ತರ ಜೊತೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು.
  ಈ ಸಂದರ್ಭದಲ್ಲಿ ಯುವ ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿಯವರು ರಾಹುಲ್ ಗಾಂಧಿಯವರ ಮೇಲಿನ ವಿಶೇಷ ಪ್ರೀತಿ ಹಾಗೂ ಗೌರವದಿಂದ ಕುಮಟಾದ ಪ್ರತಿಭೆ ಮನೋಜ್ ಗುನಗಾ ಅವರು ಚಿತ್ರಿಸಿದ ರಾಹುಲ್ ಗಾಂಧಿಯವರ ಭಾವಚಿತ್ರವನ್ನು ಶಾರದಾ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ ಅವರ ಮೂಲಕ ರಾಹುಲ್ ಗಾಂಧಿಯವರಿಗೆ ಹಸ್ತಾಂತರಿಸಿದರು.
  ಈ ಭಾವಚಿತ್ರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಪ್ರಿಯಾಂಕ ಖರ್ಗೆ, ಹೆಚ್.ಆಂಜನೇಯ, ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವ, ರಾಜ್ಯಸಭಾ ಸದಸ್ಯ ಜಯರಾಂ ರಮೇಶ, ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮಾನಂದ ನಾಯಕ ಸೇರಿದಂತೆ ಇತರ ಮುಖಂಡರು ಹಾಜರಿದ್ದು, ಕಾರ್ಯಕರ್ತರು ಭಾವಚಿತ್ರವನ್ನು ಹಿಡಿದು ಸಂಭ್ರಮಿಸಿದರು.
  ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ ನಾಯಕ, ನಾಗೇಶ ನಾಯ್ಕ, ರವಿಕುಮಾರ್ ಎಂ.ಶೆಟ್ಟಿ, ಗಾಯತ್ರಿ ಗೌಡ, ಮುಜಾಫರ್ ಶೇಖ್, ಹನುಮಂತ ಪಟಗಾರ, ಶಶಿಕಾಂತ ನಾಯ್ಕ, ಗಜಾನನ ನಾಯ್ಕ, ಎಂ.ಟಿ.ನಾಯ್ಕ, ಕೃಷ್ಣಾನಂದ ವರ್ಣೇಕರ್, ಸಚಿನ್ ನಾಯ್ಕ, ಚಂದ್ರಹಾಸ ನಾಯಕ, ಅನಿತಾ ಮಾಪಾರಿ, ವೀಣಾ ನಾಯಕ, ಜಯಂತ ನಾಯ್ಕ, ಶಾಂತಾರಾಮ ನಾಯ್ಕ, ಸಂತೋಷ ನಾಯ್ಕ, ಕಾರ್ಯಕರ್ತರು ಪಾಲ್ಗೊಂಡಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top