• Slide
    Slide
    Slide
    previous arrow
    next arrow
  • ಹಳೆ ಬಟ್ಟೆಗಳ ಸಂಗ್ರಹದ ಕೌಂಟರ್’ನಲ್ಲಿ ಹರಿದ ಬಟ್ಟೆ ಬದಲು ಉಪಯೋಗಕ್ಕೆ ಬರುವ ಹಳೆ ಬಟ್ಟೆ ಇಡಿ: ಧನಂಜಯ

    300x250 AD

    ಶಿರಸಿ: ನಗರದ ಹಳೆಬಸ್ ನಿಲ್ದಾಣದ ಪಕ್ಕದಲ್ಲಿ ಬಟ್ಟೆಬರೆ ಕಾಣದ ಭಿಕ್ಷುಕರಿಗೆ ಹಾಗೂ ತೀರಾ ಬಡಬಗ್ಗರಿಗಾಗಿ ಅನುಕೂಲವಾಗಲೆಂದು ಎರಡು ವರ್ಷಗಳ ಹಿಂದೆ ಧನಂಜಯ ಗೌಡಾ ಎಂಬುವವರು ಸಿದ್ದಾರ್ಥ ಕೃಪಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೌಂಟರೊಂದನ್ನು ತೆರೆದಿದ್ದಾರೆ.
    ಈ ಕೌಂಟರಿಗೆ ಮಲ್ಲಿಕಾರ್ಜುನ ನೆಜ್ಜೂರ್ ಎಂಬುವರು ಕೂಡಾ ತಮ್ಮ ಹೆಸರಿನಲ್ಲಿ ಸಹಾಯ ಮಾಡಿದ್ದಾರೆ. ಈ ಕೌಂಟರ್ ತೆರೆದಿರುವ ಮುಖ್ಯ ಉದ್ದೇಶವೇ ಮನೆಯಲ್ಲಿ ಬಳಸಿ ಬಿಸಾಕುವ ಉತ್ತಮ ಸ್ಥಿತಿಯಲ್ಲಿದ್ದು ತೊಳೆದು ಶುಚಿಯಾಗಿರುವ ಬಟ್ಟೆಯನ್ನು ದಾನ ಮಾಡಲು ಇಚ್ಛಿಸುವವರು ಈ ಕೌಂಟರನಲ್ಲಿ ತಂದು ಹಾಕಲೆಂದು ಮತ್ತು ಇಲ್ಲಿ ಹಾಕಿದ ಶರ್ಟ್, ಪ್ಯಾಂಟು, ಟಿ- ಶರ್ಟ್, ಲುಂಗಿ, ಸೀರೆ, ಚಾದರ್, ಬೆಡ್ ಶೀಟ್, ಚೂಡಿದಾರ ಇನ್ನಿತರ ಬಟ್ಟೆಬರೆಗಳು ನಿರ್ಗತಿಕರು ಉಪಯೋಗಿಸಿಕೊಳ್ಳಲೆಂದು.
    ಪ್ರಾರಂಭದಲ್ಲಿ ಇಲ್ಲಿ ಉತ್ತಮ ಸ್ಥಿತಿಯಲ್ಕಿರುವ ಬಟ್ಟೆಬರೆಗಳನ್ನು ಇಸ್ರ‍್ತೀ ಮಾಡಿ ಕೌಂಟರ್‌ನಲ್ಲಿ ತಂದು ಹಾಕುತ್ತಿದ್ದರು.ಆದರೆ ದಿನಗಳದಂತೆ ನಿರ್ಗತಿಕರಿಗೆ ಕೌಂಟರನ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದೆ. ಕಾರಣ ಕೆಲವು ಜನರು ತಮ್ಮ ಮನೆಯಲ್ಕಿದ್ದ ಮುಸರೆ ಬಟ್ಟಗಳನ್ನು ಕೂಡಾ ಈ ಕೌಂಟರ್‌ನಲ್ಲಿ ತಂದು ಹಾಕುತ್ತಿರುವುದರಿಂದ ಬಡವರು ಇಲ್ಲಿಗೆ ಬಂದು ಉತ್ತಮ ಸ್ಥಿತಿಯಲ್ಕಿರುವ ಬಟ್ಟೆಯನ್ನು ಹುಡುಕಿ ಹುಡುಕಿ ಕೆಳೆಗೆ ಚೆಲ್ಲಿ ಹೋಗುತ್ತಿದ್ದಾರೆ. ಕೌಂಟರ್ ಮಾಡಿರುವ ಉದ್ದೇಶ ಮಾತ್ರ ಮಾನವೀಯತೆ ದೃಷ್ಠಿಯಿಂದ ಉತ್ತಮವಾಗಿದೆ. ಆದರೆ ಮಾನವಿಯತೆ ಇಲ್ಲದವರು ಮನೆಯಲ್ಕಿ ತ್ಯಾಜ್ಯವಾಗುವಂತಹ ಹರಕು ಬಟ್ಟೆಯನ್ನು ತಂದು ಹಾಕಿ ಬಡವರಿಗೆ ಅನ್ಯಾಯಮಾಡುತ್ತಿದ್ದಾರೆ.ಪ್ರಾರಂಭದಲ್ಲಿ ಕೌಂಟರ್ ಉಪಯೋಗವನ್ನು ಹಲವಾರು ಭಿಕ್ಷುಕರು , ಕೂಲಿ ಕಾರ್ಮಿಕರು, ನಿರ್ಗತಿಕರು ಪಡೆದುಕೊಂಡಿದ್ದಾರೆ.ಮತ್ತು ಅವುಗಳನ್ನು ಪಡೆದು ಮನಸಾರೆ ಹರಸಿ ಹೋಗಿದ್ದಾರೆ. ಆದರೆ ಅಂದಿನ ಸ್ಥಿತಿ ಅಲ್ಲೀಗ ಇಲ್ಲದಂತಾಗಿದೆ. ಎಲ್ಲಿ ನೋಡಿದರೂ ಹರಿದ ಹೋಗಿರುವ ಬಟ್ಟೆಗಳೇ ಕಣ್ಣಿಗೆ ಕಾಣುತ್ತಿವೆ.ಇಷ್ಠಾದರೂ ಇರುವುದರಲ್ಲಿಯೇ ಮಾನ ಮುಚ್ಚುವಷ್ಟು ಬಟ್ಟೆ ಸಿಕ್ಕಿತಲ್ಲ ಎನ್ನುವ ಖುಷಿಯಲ್ಲಿ ಸಿಕ್ಕ ಬಟ್ಟೆಯನ್ನು ಹಿಂದೆಮುಂದೆ ನೋಡುತ್ತ ಒಯ್ಯುತ್ತಿರುವದನ್ನು ನಾವಲ್ಲಿ ದಿನನಿತ್ಯ ಕಾಣಬಹುದಾಗಿದೆ.
    ಶಿರಸಿಯಲ್ಲಿ ಸಾಕಷ್ಟು ಜನ ಉಳ್ಳವರಿದ್ದಾರೆ. ಅವರು ಕನಿಷ್ಠ ಎರಡು ವಾರಕ್ಕೊಮ್ಮೆಯಾದರೂ ಹೊಸ ಬಟ್ಟೆ ಖರಿದಿಸಿ ಹಳೆ ಬಟ್ಟೆಯನ್ನು ಮೂಲೆಗೆ ಹಾಕುತ್ತಾರೆ. ಅಂತಹ ಬಟ್ಟೆಯನ್ನು ಮೂಲೆ ಹಾಕುವುದಕ್ಕಿಂತ ಅದನ್ನೆ ತೊಳೆದು ಇಸ್ತ್ರಿ ಮಾಡಿ ಇಲ್ಲಿಗೆ ಹಾಕುವುದರಿಂದ ಬಡಜನರು ಹಬ್ಬ ಎನ್ನುವ ರೀತಿಯಲ್ಲಿ ಅದನ್ನು ಬಳಸುತ್ತಾರೆ.ಅದರ ಬದಲಾಗಿ ಮುಸುರೆ ಬಟ್ಟೆ ಹಾಕಿದರೆ ಕೌಂಟರನ ಉದ್ದೇಶವೇ ಬೇರೆಯಾದಂತಾಗುತ್ತದೆ. ಇನ್ನಾದರೂ ಜನರು ತಿಳಿದು ಕೌಂಟರ್‌ನ ಸದುಉಪಯೋಗ ಪಡಿಸಿಕೊಳ್ಳಬೇಕೆನ್ನುವುದೇ ಸಾರ್ವಜನಿಕರ ಅಭಿಲಾಷೆಯಾಗಿದೆ.

    ಕೋಟ್…
    ನಾವು ಬಡಜನರಿಗೆ ಅನುಕೂಲವಾಗಲೆಂದೇ ಸೂಕ್ತವಾದ ಜಾಗದಲ್ಲಿ ಕೌಂಟರ್ ತೆರೆದಿದ್ದೇವೆ.ಆದರೆ ಜನರು ನಮ್ಮ ಉದ್ದೇಶವನ್ನು ಸರಿಯಾಗಿ ತಳಿದುಕೊಂಡಿಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ.ಬಳಸಿ ಬಿಸಾಕುವ ಒಳ್ಳೆಯ ಬಟ್ಟೆಯ ಬದಲಾಗಿ ಮನೆಯಲ್ಲಿ ಕಸವಾಗಬಾರದೆಂದು ಮುಸುರೆ ಬಟ್ಟೆಯನ್ನು ಹಾಕುತ್ತಿದ್ದಾರೆ.ಇನ್ನು ಕೆಲವು ದಿನಗಳಲ್ಲಿ ಕೌಂಟರಿನ ಸ್ವರೂಪವನ್ನು ಬದಲು ಮಾಡುತ್ತೇವೆ.
    • ಧನಂಜಯ ಗೌಡಾ, ಸಿದ್ದಾರ್ಥ ಕೃಪಾ ಟ್ರಸ್ಟ್

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top