ಸಿದ್ದಾಪುರ : ಯಕ್ಷಗಾನದಿಂದ ಪುರಾಣ ಕಥೆಗಳನ್ನು ತಿಳಿದುಕೊಳ್ಳುವುದರ ಜತೆಗೆ ಉತ್ತಮ ಸಂಸ್ಕೃತಿಯನ್ನು ನೀಡುವ ಕಲೆ ಆಗಿದೆ. ಕಳೆದ ವರ್ಷ ಉಪೇಂದ್ರ ಪೈ ಸೇವಾ ಟ್ರಸ್ಟ್ ನಿಂದ ಶಿರಸಿ-ಸಿದ್ದಾಪುರ ತಾಲೂಕಿನಲ್ಲಿ ಹತ್ತು ಯಕ್ಷಗಾನ ಕಾರ್ಯಕ್ರಮ ಆಯೋಜಿಸಿಲಾಗಿತ್ತು. ಈ ವರ್ಷ 20 ಯಕ್ಷಗಾನ ಕಾರ್ಯಕ್ರಮ ಮಾಡಲಾಗುವುದು ಎಂದು ಉದ್ಯಮಿ ಉಪೇಂದ್ರ ಪೈ ಶಿರಸಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಯಕ್ಷತರಂಗಿಣಿ ಹಾರ್ಸಿಕಟ್ಟಾ ಇವರು ಆಯೋಜಿಸಿದ್ದ ಮಕ್ಕಳ ಯಕ್ಷಗಾನ ತರಬೇತಿ ಶಿಬಿರದ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಯಕ್ಷಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಜಿ. ಬೇಡ್ಕಣಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣ ಜಿ.ನಾಯ್ಕ ಬೇಡ್ಕಣಿ ಯಕ್ಷಗಾನ ಕಲೆ ಮುಂದುವರೆಯಬೇಕಾದರೆ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಬೇಕು.ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವುದರಿಂದ ಕಲೆಯ ಬೆಳವಣಿಗೆಯೂ ಆಗುತ್ತದೆ ಎಂದು ಹೇಳಿದರು.
ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ಅಧ್ಯಕ್ಷತೆವಹಿಸಿದ್ದರು. ಟೀಮ್ ಪರಿವರ್ತನಾ ಸಂಸ್ಥಾಪಕ ಹಿತೇಂದ್ರ ನಾಯ್ಕ, ಪತ್ರಕರ್ತ ಕನ್ನೇಶ ನಾಯ್ಕ ಕೋಲಸಿರ್ಸಿ, ಹಾರ್ಸಿಕಟ್ಟಾ ಅಘನಾಶಿನಿ ಸಾಂಬಾರು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಹೆಗಡೆ ಕುಂಬಾರಕುಳಿ, ಅನಂತ ಶಾನಭಾಗ, ಪಿ.ವಿ.ಹೆಗಡೆ, ಧನಂಜಯ ನಾಯ್ಕ ಉಪಸ್ಥಿತರಿದ್ದರು.
ಪತ್ರಕರ್ತ ನಾಗರಾಜ ಹೆಗಡೆ ಮತ್ತಿಗಾರ ಅಭಿನಂದನಾ ಮಾತನಾಡಿದರು. ರಮೇಶ ಹೆಗಡೆ ಹಾರ್ಸಿಮನೆ ನಿರ್ವಹಿಸಿದರು. ನಂದನ ನಾಯ್ಕ ಅರಶಿನಗೋಡ ವಂದಿಸಿದರು.
ನಂತರ ಶಿಬಿರದ ವಿದ್ಯಾರ್ಥಿಗಳಿಂದ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ರಾಮಚಂದ್ರ ನಾಯ್ಕ ಹೆಮ್ಮನಬೈಲ್, ಮಂಜುನಾಥ ಹೆಗಡೆ ಗುಡ್ಡೆದಿಂಬ, ಧನಂಜಯ ನಾಯ್ಕ ಪುರದಮಠ ಸಹಕರಿಸಿದರು. ಶಿಬಿರಾರ್ಥಿಗಳೊಂದಿಗೆ ಕೃಷ್ಣ ಜಿ.ನಾಯ್ಕ ಬೇಡ್ಕಣಿ ದ್ರೋಣನ ಪಾತ್ರದಲ್ಲಿ ಹಾಗೂ ಯುವರಾಜ್ ನಾಯ್ಕ ಹಳಿಯಾಳ ಅಭಿಮನ್ಯುವಿನ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ ಮತ್ತು ಕು.ಭೂಮಿಕಾ ಪ್ರಸನ್ನ ಹೆಗಡೆ ಹೊಸಗದ್ದೆ ಇವಳು ಪ್ರಥಮ ಬಾರಿಗೆ ಚಂಡೆ ನುಡಿಸಿ ಕಲಾಸಕ್ತರ ಮೆಚ್ಚುಗೆ ಗಳಿಸಿದರು.