Slide
Slide
Slide
previous arrow
next arrow

ಸೈಕಲ್ ಕಳ್ಳನ ಮನೆ ಮೇಲೆ ದಾಳಿ: 25 ಸೈಕಲ್, 3 ಬೈಕ್ ವಶ

300x250 AD

ಭಟ್ಕಳ: ಸೈಕಲ್ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಮನೆ ಮೇಲೆ ದಾಳಿ ನಡೆದ ಪೋಲಿಸರು 25 ಸೈಕಲ್, ಹಾಗೂ 3 ಬೈಕ್ ವಶಕ್ಕೆ ಪಡೆದುಕೊಂಡ ಘಟನೆ ಭಟ್ಕಳದ ಕೊಟೇಶ್ವರ ಬಳಿ ನಡೆದಿದೆ. ಬಂಧಿತ ಆರೋಪಿ ಇಲ್ಲಿನ ಕೋಟೇಶ್ವರ ನಗರದ ನಿವಾಸಿ ಮಂಜು ಕೊರಗರ ಎಂದು ತಿಳಿದು ಬಂದಿದೆ. ಈತ ತಾಲೂಕಿನ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿದ ಸೈಕಲ್ ಹಾಗೂ ಬೈಕನನ್ನು ತನ್ನ ಮನೆಯಲ್ಲಿ ತಂದು ಜಮಾ ಇಡುತ್ತಿದ್ದ ಎಂದು ಹೇಳಾಗಿದೆ.
ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಸಿಪಿಐ ದಿವಾಕರ ಪಿ, ನೇತೃತ್ವದ ತಂಡ ಮನೆ ಮೇಲೆ ದಾಳಿ ನಡೆಸಿ ಮನೆಯಲ್ಲಿ ಇಟ್ಟಿದ್ದ 25 ಸೈಕಲ್, ಹಾಗೂ 3 ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. . ಸೈಕಲ್ ಕಳೆದುಕೊಂಡ ಹಲವಾರು ಯುವಕರು ಈ ಬಗ್ಗೆ ಸುದ್ದಿ ತಿಳಿದು ತಮ್ಮ ಸೈಕಲ್ ಹಾಗೂ ಬೈಕ್ ಗೆ ಯಾವುದೆಂದು ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಭಟ್ಕಳ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿ ಮನೆಯಲ್ಲೇ ಇದ್ದ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ಮುಂದಾದಾಗ, ಬಟ್ಟೆ ಬದಲಾವಣೆ ಮಾಡುವ ನೆಪದಲ್ಲಿ ಮನೆಯ ಹಿಂಬದಿಯಿoದ ಆರೋಪಿ ಮಂಜು ಕೊರಗರ ಪರಾರಿಯಾಗಿದ್ದಾನೆ. ತಪ್ಪಿಸಿಕೊಂಡ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top