Slide
Slide
Slide
previous arrow
next arrow

ಸರ್ಕಾರಿ ಅಂಬ್ಯುಲೆನ್ಸ್ ಸೇವೆ: ತಾಂತ್ರಿಕ ಸಲಹಾ ಸಮಿತಿ ರಚನೆ

300x250 AD

ಕಾರವಾರ: ಸರ್ಕಾರಿ ಅಂಬ್ಯುಲೆನ್ಸ್ ಸೇವೆ ಮುಂದುವರೆದ ದೇಶದಲ್ಲಿ ಯಾವ ರೀತಿ ಇದೆಯೋ ಆ ರೀತಿ ಸೇವೆ ನೀಡುವುದು ಹೇಗೆ ಎಂದು ವರದಿ ನೀಡಲು ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿ ನೀಡಿದ ವರದಿಯ ಮೇಲೆ ಟೆಂಡರ್ ಕರೆಯಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

108 ತುರ್ತು ಸೇವೆಯಲ್ಲಿ ಸಮಸ್ಯೆ ಆಗುತ್ತಿರುವ ಕುರಿತು ಇಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಂದೆ ಇಂತಹ ಸಮಸ್ಯೆ ಆಗದಂತೆ ಮಾದರಿ ತುರ್ತು ಅಂಬ್ಯುಲೆನ್ಸ್ ಸೇವೆ ರಾಜ್ಯದಲ್ಲಿ ನೀಡಲಾಗುವುದು ಎಂದರು. 108 ತುರ್ತು ಅಂಬ್ಯುಲೆನ್ಸ್ ಸೇವೆ 2006- 07ರಲ್ಲಿ ಪ್ರಾರಂಭವಾಗಿತ್ತು. ಆಗ ಟೆಂಡರ್ ಮೂಲಕ ನಿರ್ವಹಣೆಗೆ ನೀಡಿರಲಿಲ್ಲ. ಸತ್ಯಂ ಎನ್ನುವ ಸಂಸ್ಥೆಗೆ ನಿರ್ವಹಣೆಗೆ ನೀಡಲಾಗಿತ್ತು. ಆಗ ಯಾವುದೇ ಸಮಸ್ಯೆ ಇರಲಿಲ್ಲ. ನಂತರ ಜಿ.ವಿ.ಕೆ ಸಂಸ್ಥೆಗೆ ನಿರ್ವಹಣೆಗೆ ನೀಡಲಾಗಿದೆ. ಆದರೆ ಇತ್ತೀಚಿಗೆ ಈ ಸಂಸ್ಥೆ ಸೇವೆ ಸರಿಯಾಗಿ ನೀಡುತ್ತಿಲ್ಲ ಎಂದರು.

300x250 AD

ಕಳೆದ ಎರಡು ತಿಂಗಳಿಂದ ಜಿವಿಕೆ ಸಂಸ್ಥೆ ಸಿಬ್ಬಂದಿಗೆ ವೇತನ ನೀಡಿಲ್ಲ. ಹಾಗಂತ ಸರ್ಕಾರ ಸಂಸ್ಥೆಗೆ ಅನುದಾನ ನೀಡಿದೆ. ಒಂದೂವರೆ- ಎರಡು ತಿಂಗಳಲ್ಲಿ ಎಲ್ಲಾ ಸಮಸ್ಯೆ ಈಡೇರಲಿದೆ. ಅಲ್ಲಿಯವರೆಗೆ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ರಾಜ್ಯದಲ್ಲಿ ಅಂಬ್ಯುಲೆನ್ಸ್ ಸೇವೆ ನೀಡಲಾಗುವುದು ಎಂದರು.

Share This
300x250 AD
300x250 AD
300x250 AD
Back to top