ಯಲ್ಲಾಪುರ: ಗ್ರಾ.ಪಂ.ಸದಸ್ಯರ ,ಅಧ್ಯಕ್ಷರ, ಉಪಾಧ್ಯಕ್ಷರ, ಹಕ್ಕುಗಳನ್ನು ಕಡಿಮೆ ಮಾಡುವ ಸರ್ಕಾರದ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ತಾಲೂಕು ಒಕ್ಕೂಟ ಆಗ್ರಹಿಸಿದೆ.
ತಾ.ಪಂ ಆವಾರದಲ್ಲಿ ಮೂರನೇ ಹಂತದ ದೂರದೃಷ್ಟಿ ಯೋಜನೆಯ ತರಬೇತಿಯಲ್ಲಿ ಪಾಲ್ಗೊಳ್ಳುವ ಮುನ್ನ ಒಕ್ಕೂಟದ ಸದಸ್ಯರು ಘೋಷಣೆ ಕೂಗಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಒಕ್ಕೂಟದ ತಾಲೂಕು ಅಧ್ಯಕ್ಷ ಎಂ.ಕೆ.ಭಟ್ ಯಡಳ್ಳಿ ಮಾತನಾಡಿ, ಗ್ರಾ.ಪಂ ಪ್ರತಿನಿಧಿಗಳ ಹಕ್ಕು ಮೊಟಕು ಗೊಳಿಸುವ ಸರ್ಕಾರದ ನಿರ್ಧಾರ ಸರಿಯಲ್ಲ. ಈ ಹಿಂದೆ ಜನಪ್ರತಿನಿಧಿಗಳ ಗಮನ ಸೆಳೆದಾಗ, ಆದೇಶ ಹಿಂಪಡೆಯುವ ಕುರಿತು ಮೌಖಿಕವಾಗಿ ಭರವಸೆ ನೀಡಿದ್ದರು. ಆದರೆ ಅಧಿಕೃತವಾಗಿ ಭರವಸೆ ಜಾರಿಯಾಗಬೇಕು ಎಂದು ಆಗ್ರಹಿಸಿದರು. ಈ ಕುರಿತು ಮೇಲಧಿಕಾರಿಗಳ ಗಮನ ಸೆಳೆಯುವಂತೆ ತಾ.ಪಂ ಇಒ ಜಗದೀಶ ಕಮ್ಮಾರ ಅವರಲ್ಲಿ ಆಗ್ರಹಿಸಿದರು. ಒಕ್ಕೂಟದ ಪ್ರಮುಖರಾದ ಕೆ.ಟಿ.ಹೆಗಡೆ ಆನಗೋಡ, ರಾಮಕೃಷ್ಣ ಅಳ್ವೆಗದ್ದೆ ಇತರರಿದ್ದರು.