Slide
Slide
Slide
previous arrow
next arrow

ಕೌಟುಂಬಿಕ  ವ್ಯವಸ್ಥೆಯನ್ನು ಹಾಳು ಮಾಡುವ ಮೂಲಕ ದುಶ್ಚಟ ಸಮಾಜಕ್ಕೂ ಮಾರಕ: ಡಿಎಸ್ಪಿ

300x250 AD

ಶಿರಸಿ : ದುಶ್ಚಟ ಕೌಟುಂಬಿಕ  ವ್ಯವಸ್ಥೆಯನ್ನೂ ಹಾಳು ಮಾಡುವ ಮೂಲಕ ಸಮಾಜಕ್ಕೂ ಮಾರಕವಾಗಬಲ್ಲದು ಎಂದು ಡಿಎಸ್ಪಿ ರವಿ ಡಿ ನಾಯ್ಕ ಹೇಳಿದರು.

ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾದ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

300x250 AD

ಕುಟುಂಬ ಭದ್ರವಾಗಿದ್ದರೆ ನೆಮ್ಮದಿ ಬದುಕು ಸಿಗುತ್ತದೆ.  ಕುಟುಂಬದಲ್ಲಿ ಒಬ್ಬ ವ್ಯಕ್ತಿ ಚಟಕ್ಕೆ ದಾಸನಾದರೆ ಇಡೀ‌ ಕುಟುಂಬ ನಷ್ಟಕ್ಕೆ ಬೀಳುತ್ತದೆ ಎಂದರು. ಶಿರಸಿ ಉಪ ವಿಭಾಗದಲ್ಲಿ‌ ಗಾಂಜಾ ಮಾದಕ ಸೇವನೆ  ಮಾಡುತ್ತಿದ್ದಾರೆ. ಸಾಗಾಟ, ಸೇವನೆ  ಮಾಡುವರನ್ನೂ ಕರೆದು ಪ್ರಕರಣ ದಾಖಲಿಸಲಾಗುತ್ತಿದೆ ಎಂದರು. ಮಾದಕ ವಸ್ತುಗಳ ದಾಸನಾದರೆ ಸಮಾಜದ ನೆಮ್ಮದಿಯೂ ಕೆಡುತ್ತದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವರೂ ದುಶ್ಚಟಗಳಿಗೆ ಬಲಿಯಾಗುತ್ತಾರೆ. ನಗರವನ್ನು ಮಾದಕ ವಸ್ತು ಸೇವನೆಯಿಂದ ಮುಕ್ತಗೊಳಿಸಬೇಕಿದೆ. ಇದಕ್ಕೆ ಸಾರ್ವಜನಿಕರ ಸಹಕಾರ, ಸಂಘಸಂಸ್ಥೆಗಳ ಸಹಕಾರ ಮುಖ್ಯ ಎಂದರು. ಜಿಲ್ಲಾ‌ ನಿರ್ದೆಶಕ ಬಾಬು ನಾಯ್ಕ, ಮದ್ಯಪಾನ ಮುಕ್ತರಾಗಿ ಎಲ್ಲರೂ ಸ್ವಸ್ಥ ಜೀವನ ನಡೆಸುವಂತೆ ಆಗಬೇಕು. ಪಾನಮುಕ್ತ ಜೀವನ ನಡೆಸಬೇಕು ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮದ್ಯ ಮುಕ್ತ ಕುಟುಂಬದ ಸದಸ್ಯರು ತಮ್ಮ ಅನಿಸಿಕೆ ಹಂಚಿಕೊಂಡರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಭಾಸ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತೀಯ ಗ್ರಾಹಕ ಪಂಚಾಯತ ಕರ್ನಾಟಕ ಪ್ರಾಂತದ ಅಧ್ಯಕ್ಷ ರಾಮು ಹರಿ ಕಿಣಿ ದುಶ್ಚಟಗಳ ವಿರುದ್ಧ ಜಾಗೃತಿಯ ಬಗ್ಗೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಮಾರಿಕಾಂಬಾ ದೇವಾಲಯದ ಅಧ್ಯಕ್ಷ ರವೀಂದ್ರ ನಾಯ್ಕ, ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ, ಜಿಲ್ಲಾ ಜನ ಜಾಗೃತಿ ವೇದಿಕೆಯೆ ಸಂಧ್ಯಾ ಕುರ್ಡೇಕರ್, ಗೌರಿ ನಾಯ್ಕ ಇದ್ದರು. ದಿನೇಶ ಜಿ ಕಾರ್ಯಕ್ರಮ ನಿರ್ವಹಸಿದರು.

Share This
300x250 AD
300x250 AD
300x250 AD
Back to top