ಶಿರಸಿ :ನಗರದ ಶ್ರೀ ಮಾರಿಕಾಂಬಾ ದೇವಸ್ಥಾನ ಹಾಗೂ ಗ್ರಾಮಾಭ್ಯುದಯ ಶ್ರೀ ಸೋಂದಾ ಸ್ವರ್ಣವಲ್ಲೀ ಇವುಗಳ ಸಂಯುಕ್ತ ಆಶ್ರಯದಲ್ಲಿ ಹದಿಮೂರನೇ ವರ್ಷದ ದಂಪತಿಗಳ ಶಿಬಿರವನ್ನು ಅ .12 ಬುಧವಾರ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ನವದಂಪತಿಗಳು ಹಾಗೂ 5 ವರ್ಷಗಳ ವರೆಗಿನ ದಂಪತಿಗಳಿಗೆ ಅವಕಾಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ಒಳ್ಳೆಯ ಸಂತಾನ ಪಡೆಯಲು, ಸ್ತ್ರೀ ಭ್ರೂಣ ಹತ್ಯೆ ತಡೆ, ವಿವಾಹ ವಿಚ್ಛೇದನ ತಡೆಯುವ ಬಗ್ಗೆ ತಜ್ಞ ವೈದ್ಯರಿಂದ ಹಾಗೂ ವಿದ್ವಾಂಸರಿಂದ ಮಾರ್ಗದರ್ಶನ ಉಪನ್ಯಾಸ ನಡೆಯಲಿದ್ದು ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯ ಮತ್ತು ಕುಟುಂಬ ಜೀವನದ ಮಹತ್ವ ಕುರಿತು ಕುಟುಂಬ ಪ್ರಭೋದನ್ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಯೋಜಕ ವೆಂಕಟೇಶ ಹೆಗ್ಡೆ ನಾರಾವಿ ಇವರು ಮಾರ್ಗದರ್ಶನ ನೀಡಲಿದ್ದಾರೆ.
ಬೆಳಿಗ್ಗೆ 10ಗಂಟೆಯಿಂದ ಶ್ರೀ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷರು, ಧರ್ಮದರ್ಶಿಗಳು ಮತ್ತು ಅಧ್ಯಕ್ಷರು, ನಿರ್ದೇಶಕರುಗಳು ಗ್ರಾಮಾಭ್ಯುದಯ ಶ್ರೀ ಸೋಂದಾ ಸ್ವರ್ಣವಲ್ಲೀ ಇವರುಗಳ ಉಪಸ್ಥಿತಿಯಲ್ಲಿ ಪ್ರಾರಂಭವಾಗಲಿದೆ.
ಸಂಜೆ 4.00 ಗಂಟೆಗೆ ಸೋಂದಾ ಸ್ವರ್ಣವಲ್ಲೀಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವದಿಸಲಿದ್ದಾರೆ. ಈ ಸಂದರ್ಭದಲ್ಲಿ ಎರಡೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆಯಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. .
ಹೆಚ್ಚಿನ ಮಾಹಿತಿಗೆ ಮೋ: 9480941230, 9483039491, 9480400456 ಸಂಪರ್ಕಿಸಲು ಕೋರಿದೆ