ಕಾರವಾರ: ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಅವರನ್ನು ಅವಧಿ ಮುಂಚೆ ವರ್ಗಾವಣೆ ಮಾಡುತ್ತಿರುವುದು ಬಹಳ ವಿಷಾದನೀಯ ಸಂಗತಿ. ಇಂಥ ದಕ್ಷ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಅಪರಾಧಿಗಳಿಗೆ ,ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿರುವದೇ ಇವರ ವರ್ಗಾವಣೆಗೆ ಕಾರಣವಾಗಿರಬಹುದು ಎಂದು ಕಾಂಗ್ರೆಸ್ ಕಾನೂನು ವಿಭಾಗದ ರಾಜ್ಯ ಕಾರ್ಯದರ್ಶಿ,ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಮುಕ್ತೇಶ ಗೌಡ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನೇಕ ಅಪರಾಧ ಚಟುವಟಿಕೆಗಳು ಸ್ಥಗಿತವಾಗಿರುವುದು, ನಿಯಂತ್ರಣಕ್ಕೆ ಬಂದಿರುವುದು ಈಗಿನ ಆಡಳಿತಾರೂಢ ಸರ್ಕಾರಕ್ಕೆ ಗಮನಕ್ಕೆ ಬಂದಿರುವುದಿಲ್ಲವೇ? ಇಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಅವಧಿಗೆ ಮುನ್ನ ವರ್ಗಾವಣೆ ಮಾಡುತ್ತಿರುವುದು ಅನೇಕ ಪ್ರಾಮಾಣಿಕ ದಕ್ಷ ಅಧಿಕಾರಿಗಳಿಗೆ ನೈತಿಕ ಸ್ಥೈರ್ಯ ಕುಸಿಯುವಂತಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸುಮನ್ ಪೆನ್ನೇಕರ್ ಅವರು ಆಡಳಿತ ಪಕ್ಷದ ಕೈಗೊಂಬೆಯಾಗದ ಕಾರಣ ವರ್ಗಾವಣೆಯ ಬೆದರಿಕೆ ರೀತಿಯಲ್ಲಿ ಮಾಡಲು ನಿಂತಿರುವುದು ಜನಸಾಮಾನ್ಯರಲ್ಲಿ ಅನುಮಾನ ಮೂಡುವಂತಾಗಿದೆ . ಮಹಿಳಾ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ದಕ್ಷ ಪ್ರಾಮಾಣಿಕವಾಗಿ ಎಲ್ಲಿಯೂ ಚ್ಯುತಿ ಬರದ ಹಾಗೆ ಜನಾನುರಾಗಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಖುಷಿಯ ವಿಚಾರ. ಅನೇಕ ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿನಿಯರಿಗೆ ಮನೋಸ್ಥೈರ್ಯ ತುಂಬಿರುವುದು ಗಮನಾರ್ಹ ವಿಷಯವಾಗಿದೆ . ನಿರ್ಭಯ ಸುರಕ್ಷ 112 ರ ವಾಹನ ಕಾರ್ಯನಿರ್ವಹಿಸುವ ವೈಖರಿ ಶ್ಲಾಘನೀಯ ಒಬ್ಬ ದಕ್ಷ ಮಹಿಳಾ ಪೊಲಿಸ ವರಿಷ್ಠಾಧಿಕಾರಿ ಎಷ್ಟೋ ತಾಯಂದಿರಿಗೆ ದೇವತೆಯಾಗಿದ್ದಾರೆ. ಹಾದಿ ತಪ್ಪಿದ ಮಕ್ಕಳು ಗಾಂಜಾ ಮಟ್ಕಾ ಚಟದಿಂದ ದೂರವಾಗಿ ಒಳ್ಳೆಯ ಜೀವನ ನಡೆಸುವಲ್ಲಿ ಸಹಕಾರಿಯಾಗಿದ್ದಾರೆ. ಎಷ್ಟೋ ಕುಟುಂಬಗಳು ಆರೋಗ್ಯಕರ ಜೀವನ ಮಾಡುತ್ತಿದ್ದಾರೆ ಮಹಿಳೆಯರ ಸುರಕ್ಷೆಗೆ,ಜೀವನ ನಿರ್ವಹಣೆಗೆ ಅನೇಕ ಅಪರಾಧಿಕ ಚಟುವಟಿಕೆಗಳ ನಿಯಂತ್ರಣ ಮಾಡಿ ಕುಟುಂಬದ ಸ್ವಾಸ್ಥ್ಯ ಕಾಪಾಡವಲ್ಲಿ ಪೊಲೀಸ್ ಡಿಪಾರ್ಟ್ ಮೆಂಟ್ ಕಾರ್ಯನಿರ್ವಹಿಸುತ್ತಿರುವುದರಿಂದ ತಾಯಂದಿರು ಮಹಿಳೆಯರು ನೆಮ್ಮದಿಯಿಂದ ನಿದ್ದೆ ಮಾಡುವಂತಾಗಿದೆ.ಇಂಥ ಒಬ್ಬ ಅಧಿಕಾರಿಯ ಅವಶ್ಯಕತೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಅತ್ಯವಶ್ಯಕವಾಗಿರುವುದರಿಂದ ಮಹಿಳಾ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಅವರ ಸೇವೆ ಹೀಗೆ ಮುಂದುವರೆಯಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಸರಿಯಾದ ಕಾರಣವಿಲ್ಲದೆ ಇವರ ವರ್ಗಾವಣೆ ಕೈಬಿಡುವಂತೆ ಸರ್ಕಾರಕ್ಕೆ ಜ್ಯೋತಿ ಮುಕ್ತೇಶ ಗೌಡ ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ.