ಶಿರಸಿ: ಇಲ್ಲಿನ ಶಬರ ಸಂಸ್ಥೆಯು ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ತಾಲೂಕಿನ ಜಡ್ಡಿಗದ್ದೆಯ ಕೋಡನಗದ್ದೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಅ.12ರ ಸಂಜೆ 7 ರಿಂದ ‘ಶನೇಶ್ವರಾಂಜನೇಯ’ ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದೆ.
ಗ್ರಾ.ಪಂ.ಸದಸ್ಯ ಪ್ರವೀಣ ಮಣ್ಮನೆ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ರಾಜೇಶ್ವರಿ ಭಟ್ಟ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಉಪಾಧ್ಯಕ್ಷೆ ಸರಿತಾ ನಾಯ್ಕ, ಸದಸ್ಯರಾದ ರಾಘವೇಂದ್ರ ಹೆಗಡೆ, ಸತ್ಯನಾರಾಯಣ ಹೆಗಡೆ, ನಾಗರತ್ನ ಬೋವಿ, ದೇವಕಿ ಸಿದ್ದಿ ಪಾಲ್ಗೊಳ್ಳುವರು.
ಯಕ್ಷಗಾನ ಹಿಮ್ಮೇಳದಲ್ಲಿ ಗಜಾನನ ಭಟ್ಟ, ಅನಿರುದ್ಧ ಬೆಣ್ಣೆಮನೆ, ಉಮೇಶ ಹೆಗಡೆ, ಮುಮ್ಮೇಳದಲ್ಲಿ ರಮಾನಂದ ಹಲ್ಲೆಕೊಪ್ಪ, ನಿರಂಜನ ಜಾಗನಳ್ಳಿ, ಪ್ರವೀಣ ತಟ್ಟಿಸರ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ಸಂಯೋಜಕ ನಾಗರಾಜ ಜೋಶಿ ತಿಳಿಸಿದ್ದಾರೆ.