ಜೊಯಿಡಾ: ತಾಲೂಕಿನ ಕುಂಡಲ್ ವಾರ್ಡ್ಗೆ ಮೀಸಲಿಟ್ಟ ಎಸ್.ಟಿ ಮೀಸಲಾತಿ ಬದಲಾವಣೆಯಾಗಿಲ್ಲ. ಸ್ಥಳೀಯರ ವಿರೋಧದ ನಡುವೆಯೂ ಈ ಹಿಂದಿನಂತೆ ನಾಮನಿರ್ದೇಶನ ಮಾಡಿದ್ದಲ್ಲಿ ತಾ.ಪಂ, ಜಿ.ಪಂ ಹಾಗೂ ವಿಧಾನಸಭಾ ಚುನಾವಣೆ ಬಹಿಷ್ಕಾರ ಮಾಡಲಾಗುತ್ತದೆ ಎಂದು ಕುಂಡಲ್ ವಾರ್ಡ್ ಗ್ರಾಮಸ್ಥರು ಕುರಾವಲಿಯಲ್ಲಿ ಸಭೆ ಸೇರಿ ತೀರ್ಮಾನ ಮಾಡಿದ್ದಾರೆ.
ಕುಂಡಲ್ ವಾರ್ಡ್ಗೆ ಚುನಾವಣಾ ಆಯೋಗದಿಂದ ಎಸ್.ಟಿ ಮೀಸಲಾತಿ ನಿಗದಿಪಡಿಸಿ ಐದನೇ ಸಲ ಚುನಾವಣೆ ಘೋಷಣೆ ಅಕ್ಟೋಬರ್ 28 ರಂದು ದಿನಾಂಕ ನಿಗದಿ ಆಗಿದೆ. ಅ.13ರಿಂದ 18ರ ತನಕ ನಾಮಪತ್ರ ಸಲ್ಲಿಸಬಹುದಾಗಿದೆ. ಆದರೆ ಸ್ಥಳೀಯ ಕುಂಡಲ್ ವಾರ್ಡ್ ವ್ಯಾಪ್ತಿಯಲ್ಲಿ ಹಿಂದುಳಿದ ಕುಣಬಿ ಜನಾಂಗದವರು ವಾಸವಾಗಿದ್ದು ಹಿಂದುಳಿದ ವರ್ಗ ‘ಅ’ ಅಥವಾ ಸಾಮಾನ್ಯ ಮಿಸಲಾತಿ ಮಿಸಲಿಡಬೇಕೆಂದು ಆಗ್ರಹವಾಗಿದೆ. ಗ್ರಾಮ ಪಂಚಾಯತ ಚುನಾವಣೆ ಮಿಸಲಾತಿ ಬದಲಾಗುವ ತನಕ ಬಹಿಷ್ಕಾರ ಖಂಡಿತ ಮುಂದುವರಿಯಲಿದೆ. ಗ್ರಾಮಸ್ಥರ ತೀರ್ಮಾನ ವಿರೋಧಿಸಿ ಈ ಹಿಂದಿನಂತೆ ಹೊರಗಿನಿಂದ ತಂದು ನಾಮನಿರ್ದೇಶನ ಮಾಡಿದಲ್ಲಿ ಬರುವ ತಾ.ಪಂ, ಜಿ.ಪಂ ಹಾಗೂ ವಿಧಾನ ಸಭೆ ಚುನಾವಣೆ ಬಹಿಷ್ಕಾರ ಮಾಡುವುದು ಖಂಡಿತವೆ0ದು ಸ್ಥಳೀಯರು ಸಭೆಯಲ್ಲಿ ನಿರ್ಣಯಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ತುಕಾರಾಮ ವೆಳಿಪ, ರಮೇಶ ವೆಳಿಪ, ರಾಜಾರಾಮ ವೆಳಿಪ, ವಿಠಲ್ ವೆಳಿಪ, ನಾರಾಯಣ ವೆಳಿಪ, ವಸಂತ ಗಾವಡಾ, ತಮ್ಮಾ ಗಾವಡಾ, ಚಂದ್ರು ವೆಳಿಪ, ಸೋಮನಾಥ ವೆಳಿಪ, ಆಪ್ಪಿ ವೆಳಿಪ, ಶ್ರೀಕಾಂತ ವೆಳಿಪ, ಗೋಪಾಳ ವೇಳಿಪ, ಸುರೇಶ ವೇಳಿಪ ಮುಂತಾದವರು ಇದ್ದರು.