Slide
Slide
Slide
previous arrow
next arrow

ಸಾಮಾಜಿಕ ಭದ್ರತಾ ಮಾಸದ ಅಂಗವಾಗಿ ಜನ ಜಾಗೃತಿ ಅಭಿಯಾನ

300x250 AD

ಸಿದ್ದಾಪುರ: ಪ್ರತಿಯೊಬ್ಬ ಮನುಷ್ಯನಿಗೂ ಜೀವಿತದ ಕೊನೆಯವರೆಗೂ ವಿಮಾ ರಕ್ಷಣೆ ಅಗತ್ಯ. ನಮ್ಮ ವೃದ್ಧಾಪ್ಯದಲ್ಲಿ ಅಸಡ್ಡೆಗೆ ಒಳಗಾಗದಿರಲು ನಿಶ್ಚಿತ ಆದಾಯ ಬರುವಂತಹ ಪೆನ್ಶನ್ ಯೋಜನೆಯಲ್ಲಿ ಹಣ ತೊಡಗಿಸಿಕೊಂಡು ನಿಶ್ಚಿಂತೆಯಿಂದ ಇರಬೇಕು ಎಂದು ಭಾರತೀಯ ಜೀವವಿಮಾ ನಿಗಮದ ಶಿರಸಿ ಶಾಖೆಯ ಹಿರಿಯ ಶಾಖಾಧಿಕಾರಿ ಗಣಪತಿ ಎನ್.ಭಟ್ಟ ಹೇಳಿದ್ದಾರೆ.

ಅವರು ಸಾಮಾಜಿಕ ಭದ್ರತಾ ಮಾಸದ ಅಂಗವಾಗಿ ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೆನ್ಶನ್ ಯೋಜನೆ ಕುರಿತ ಸಾರ್ವಜನಿಕ ತಿಳುವಳಿಕೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಇಂದು ದೇಶದ 95 ಶೇಕಡಾದಷ್ಟು ಹಿರಿಯರ ವೃದ್ಧಾಪ್ಯ ಜೀವನ ಸಂತೋಷಕರವಾಗಿಲ್ಲ ಎಂದು ಸಮೀಕ್ಷೆ ತಿಳಿಸುತ್ತಿದೆ. ಅದರಲ್ಲೂ ಅನಾರೋಗ್ಯ ಪೀಡಿತ ವೃದ್ಧರ ಸ್ಥಿತಿಯಂತೂ ಕರುಣಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ದುಡಿಮೆ ಮಾಡುವ ವಯಸ್ಸಿನಲ್ಲಿ, ಇಲ್ಲವೇ ಇಳಿವಯದಲ್ಲಿಯೂ ಹಣವಿರುವಾಗ ಭಾರತ ಸರ್ಕಾರ ಸ್ವಾಮಿತ್ವದ ಸಂಸ್ಥೆಯಾದ ಎಲ್‌ಐಸಿಯ ಪಿಂಚಣಿ ಯೋಜನೆಗಳಾದ ಪ್ರಧಾನಮಂತ್ರಿ ವಯ ವಂದನಾ, ಜೀವನ ಅಕ್ಷಯ, ಜೀವನ ಶಾಂತಿ, ಸರಳ ಪೆನ್ಶನ್, ನ್ಯೂ ಪೆನ್ಶನ್ ಪ್ಲಸ್ ಈ ಮುಂತಾದವುಗಳಲ್ಲಿ ಹಣ ತೊಡಗಿಸಿಕೊಂಡು ಜೀವನಪರ್ಯಂತ ಯೋಜನಾಬದ್ಧವಾದ ನೆಮ್ಮದಿಯ ಜೀವನ ಅನುಭವಿಸಬೇಕು ಎಂದು ಅವರು ಸಲಹೆ ನೀಡಿದರು.

300x250 AD

ನಿಗಮದ ಸಿದ್ದಾಪುರ ಸಂಪರ್ಕ ಶಾಖೆಯ ಶಾಖಾಧಿಕಾರಿ ಮಲ್ಲಿಕಾರ್ಜುನ ನೀಲಗುಂದ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿಗಳಾದ ದೀಪಕ ಹೆಗಡೆ, ಅಮಿತ ನಾಯಕ, ಸಿದ್ದಾರ್ಥ ಬರ‍್ಕರ್ ನಿಗಮದ ಹಿರಿ ಕಿರಿಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪೆನ್ಶನ್ ಯೋಜನೆ ಕುರಿತು ವಿವರಿಸುತ್ತಾ ಕರಪತ್ರಗಳನ್ನು ಹಂಚಿ ಪಟ್ಟಣದುದ್ದಕ್ಕೂ ಜಾಗೃತಿ ಜಾಥಾ ನಡೆಸಲಾಯಿತು.

Share This
300x250 AD
300x250 AD
300x250 AD
Back to top