ಯಲ್ಲಾಪುರ: ವಯಸ್ಸಾದಾಗ ಪಿಂಚಣಿ ಇಲ್ಲದಿದ್ದರೆ ತೊಂದರೆ ಅನುಭವಿಸಬೇಕಾದೀತು ಎಂದು ಶಿರಸಿಯ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಶಾಖಾಧಿಕಾರಿ ಜಿ.ಎನ್.ಭಟ್ಟ ಹೇಳಿದರು.
ಇತ್ತೀಚೆಗೆ ಅವರು ನಿಗಮದ ತಾಲೂಕು ಶಾಖಾ ಕಾರ್ಯಾಲಯದಲ್ಲಿ ಸಾಮಾಜಿಕ ಭದ್ರತಾ ಮಾಸದ ಪಿಂಚಣಿಯ ತಿಳುವಳಿಕೆಯ ಕುರಿತು ಅಭಿಯಾನದ ನೇತೃತ್ವ ವಹಿಸಿ ಮಾತನಾಡುತ್ತಿದ್ದರು. ನಮ್ಮ ಜೀವನ ವಿಧಾನವು ಬದಲಾಗುತ್ತಿದೆ. ಕಾಲದ ಸ್ಥಿತಿ ಬದಲಾಗಿದೆ. ನಮಗೆ 60 ವರ್ಷ ಕಳೆದ ಮೇಲೆ ಆರ್ಥಿಕತೆಯ ಅಗತ್ಯ ಇದೇ ಎಂಬುದನ್ನು ಶೇ 95ರಷ್ಟು ಜನ ಯೋಚನೆ ಮಾಡುವುದೇ ಇಲ್ಲ. ಭವಿಷ್ಯಕ್ಕಾಗಿ ಈಗಲೇ ಯೋಜನೆ ರೂಪಿಸಿಕೊಳ್ಳಬೇಕು, ನಮ್ಮ ಭವಿಷ್ಯತ್ತಿಗಾಗಿ ಪೆಶ್ಸನ್ ಯೋಜನೆಯಲ್ಲಿ ಹಣ ಹುಡುವುದು ಅವಶ್ಯವಾಗಿದೆ. ಅದರಲ್ಲಿಯೂ ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಎಲ್‌ಐಸಿಯಲ್ಲಿ ಹಣ ತೊಡಗಿಸುವಂತೆ ಅವರು ಕರೆ ನೀಡಿದರು.
ಶಾಖಾಧಿಕಾರಿ ಗೋಪಾಲಕೃಷ್ಣ ಆಚಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಸದಾನಂದ ಭಟ್ಟ ಮಳವಳ್ಳಿ ಸಾಂದರ್ಭಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಪ್ರತಿನಿಧಿಗಳಾದ ಡಿ.ಜಿ.ಶೆಟ್ಟಿ, ಶಂಕರ ಭಟ್ಟ ತಾರೀಮಕ್ಕಿ, ಕೃಷ್ಣ ಹೆಗಡೆ, ಸತ್ಯನಾರಾಯಣ ಚಿಮ್ನಳ್ಳಿ, ದತ್ತಾತ್ರೇಯ ಭಟ್ಟ, ಲಲಿತಾ ಹೆಗಡೆ, ಭಾಸ್ಕರ ಭಟ್ಟ, ಮಣಿಕಂಠ ಕಾಕಮಾಡಿ, ನಾರಾಯಣ ಹೆಗಡೆ, ವಿಘ್ನೇಶ್ವರ ಗಾಂವ್ಕರ, ಶಾಖೆಯ ಸಿಬ್ಬಂದಿ ಸುದೀಂದ್ರ ಪೈ ಮತ್ತಿತರರು ಉಪಸ್ಥಿತರಿದ್ದರು.