Slide
Slide
Slide
previous arrow
next arrow

ಗೋವಾದಲ್ಲಿ ರಾಜ್ಯದ ಟ್ಯಾಕ್ಸಿ ಚಾಲಕರಿಗೆ ಕಿರುಕುಳ; ಮನವಿ ಸಲ್ಲಿಕೆ

300x250 AD

ದಾಂಡೇಲಿ: ಗೋವಾಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಕರ್ನಾಟಕದ ಟ್ಯಾಕ್ಸಿ ಚಾಲಕರುಗಳಿಗೆ ಗೋವಾ ಪೊಲೀಸರಿಂದ ತೀವ್ರ ಕಿರುಕುಳವಾಗುತ್ತಿದ್ದು, ಸಂಚಾರ ನಿಯಮಗಳನ್ನು ಪಾಲಿಸಿದ್ದರೂ ಅಲ್ಲಲ್ಲಿ ನಿಲ್ಲಿಸಿ, ಪರಿಶೀಲನೆಯ ನೆಪದಲ್ಲಿ ಸಮಯ ಹರಣ ಮಾಡುವುದರ ಜೊತೆಗೆ ಮಾನಸಿಕವಾಗಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಪುನೀತ್ ರಾಜಕುಮಾರ್ ಟ್ಯಾಕ್ಸಿ ಚಾಲಕರ ಸೇನೆಯ ರಾಜ್ಯ ಸಂಘಟನೆಯ ಸಲಹೆಗಾರ ಪರಶುರಾಮ ಡಿ.ಬಗ್ರೀಕರ ಆರೋಪಿಸಿದ್ದಾರೆ.

ರಶೀದಿ ಪಡೆದು ಪಾರ್ಕಿಂಗ್ ಸ್ಥಳದಲ್ಲಿ ರಾತ್ರಿ ವೇಳೆಯಲ್ಲಿ ನಿಲ್ಲಿಸಲಾದ ವಾಹನಗಳಲ್ಲಿರುವ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ನಿದ್ದೆ ಮಂಪರು ಔಷಧಿಯನ್ನು ಸಿಂಪಡಿಸಿ, ಕಳ್ಳತನ ಚಟುವಟಿಕೆ ನಡೆಯುತ್ತಿದೆ. ಪರಿಣಾಮವಾಗಿ ಗೋವಾಕ್ಕೆ ಪ್ರಯಾಣಿಕರನ್ನು ಹೊತ್ತೊಯ್ದಿದ್ದ ಹಲವು ಟ್ಯಾಕ್ಸಿಗಳಿಂದ19 ಮೊಬೈಲ್, ನಗದು 60ರಿಂದ 70 ಸಾವಿರ ರೂ. ಮತ್ತು 4 ಬಂಗಾರದ ಸರಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ಪರಿಣಾಮವಾಗಿ ಗೋವಾಕ್ಕೆ ಬಾಡಿಗೆ ಹೋಗಲು ಇದೀಗ ಭಯದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಿ ರಾಜ್ಯದ ಟ್ಯಾಕ್ಸಿಗಳ ಮೇಲೆ ನಡೆಯುತ್ತಿರುವ ಪೊಲೀಸರ ದಬ್ಬಾಳಿಕೆ ಮತ್ತು ಪಾರ್ಕಿಂಗ್ ಸ್ಥಳದಲ್ಲಿ ನಡೆಯುತ್ತಿರುವ ಕಳ್ಳತನದ ಕುರಿತಂತೆ ನಮ್ಮ ಜಿಲ್ಲೆಯ ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರು ಗೋವಾದ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಆಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

300x250 AD

ಗೋವಾದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ಹಣ ಪಾವತಿಸಿದರೂ, ಅಲ್ಲಿ ಸರಿಯಾದ ಮೂಲಸೌಕರ್ಯವಿಲ್ಲ. ಪಾರ್ಕಿಂಗ್ ಸ್ಥಳದಲ್ಲಿ ಶೌಚಾಲಯ, ಮೂತ್ರಾಲಯ, ಸ್ನಾನಗೃಹದ ವ್ಯವಸ್ಥೆಯಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇನ್ಮುಂದೆ ಗೋವಾಕ್ಕೆ ಪ್ರಯಾಣಿಕರನ್ನು ಹೊತ್ತುಕೊಂಡು ಹೋಗುವ ಟ್ಯಾಕ್ಸಿಯವರು ಬಹಳ ಎಚ್ಚರಿಕೆ ಇರಬೇಕೆಂದು ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಪ್ರಚಾರ ಸಮಿತಿಯ ಅಧ್ಯಕ್ಷ ಅಜಯ್ ಬಾಗೇವಾಡಿ ಮತ್ತು ಸಂಘದ ಸದಸ್ಯರಾದ ವಿನಾಯಕ ಬಿ.ಬೆಳವಾಡಿ ಇದ್ದರು.

Share This
300x250 AD
300x250 AD
300x250 AD
Back to top