• Slide
  Slide
  Slide
  previous arrow
  next arrow
 • ರೈತರ ಬೇಡಿಕೆ ಈಡೇರಿಸಲು ಧಾರವಾಡದಲ್ಲಿ ಸಕ್ಕರೆ ಸಚಿವರಿಂದ ಸಭೆ: ಸುನೀಲ್ ಹೆಗಡೆ

  300x250 AD

  ಹಳಿಯಾಳ: ಪಟ್ಟಣದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ವಿಚಾರದಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕಾರ್ಖಾನೆ ಹಾಗೂ ರೈತರ ಸಮ್ಮುಖದಲ್ಲಿ ಚರ್ಚಿಸಿ, ಈ ಸಾಲಿನಲ್ಲಿ ಎಫ್‌ಆರ್‌ಪಿ ದರವನ್ನು ರೂ.೨೫೯೨ಕ್ಕಿಂತ ಹೆಚ್ಚಿಸಿ ಬಡ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಶುಕ್ರವಾರ ಬೆಂಗಳೂರಿನಲ್ಲಿ ಸಕ್ಕರೆ ಸಚಿವ ಶಂಕರಪಾಟಿಲ್ ಮುನೆನಕೊಪ್ಪ ಅವರಿಗೆ ಇಲ್ಲಿನ ಮಾಜಿ ಶಾಸಕ ಸುನೀಲ್ ಹೆಗಡೆ ಮನವಿ ಮಾಡಿದ್ದಾರೆ.

  ಸಚಿವರೊಂದಿಗೆ ಈ ಬಗ್ಗೆ ಮಾತನಾಡಿದ್ದು, ಹಳಿಯಾಳ ಪ್ಯಾರಿ ಕಾರ್ಖಾನೆಯ ಅಧಿಕಾರಿಗಳು, ರೈತ ಮುಖಂಡರು ನಮ್ಮನ್ನೊಳಗೊಂಡ ಒಂದು ನಿಯೋಗಕ್ಕೆ ಧಾರವಾಡಕ್ಕೆ ಬರುವಂತೆ ಅವರು ಆಹ್ವಾನಿಸಿದ್ದಾರೆ. ಧಾರವಾಡದಲ್ಲಿ ಈ ಬಗ್ಗೆ ಸಭೆ ಸೇರಿ ರೈತರಿಗೆ ನ್ಯಾಯಯುತವಾಗಿ ಈಡೇರಬೇಕಾದ ಬೇಡಿಕೆಗಳ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿ ರೈತರಿಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆಂದು ಹೆಗಡೆ ತಿಳಿಸಿದ್ದಾರೆ.

  ಹಳಿಯಾಳದ ಈಐಡಿ ಪ್ಯಾರಿ ಶುಗರ್ಸ್ ಪ್ರೈ.ಲಿ. ಈ ಕಾರ್ಖಾನೆಯು ಕಳೆದ ವರ್ಷ ೧೩ ಲಕ್ಷ ಟನ್ ಕಬ್ಬು ನುರಿಸಿದ್ದು, ಕಳೆದ ಸಾಲಿನಲ್ಲಿ ಎಫ್‌ಆರ್‌ಪಿ ದರ ರೂ.೨೫೯೨ ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೊರತುಪಡಿಸಿ ನಿಗದಿಯಾಗಿತ್ತು. ಆದರೆ ಈ ಸಾಲಿನಲ್ಲಿ ಎಫ್‌ಆರ್‌ಪಿ ದರವನ್ನು ೨೩೭೧ ರೂ. (ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೊರತುಪಡಿಸಿ) ನಿಗದಿ ಮಾಡಿದ್ದಾರೆ. ಈ ವರ್ಷದಲ್ಲಿ ರಸಗೊಬ್ಬರ ದರ ಒಂದು ಚೀಲಕ್ಕೆ ರೂ.೧೬೦೦ ಏರಿಕೆಯಾಗಿದ್ದು, ಕೂಲಿ ಕಾರ್ಮಿಕರ ವೇತನವು ಸಹ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಎಫ್‌ಆರ್‌ಪಿ ದರ ಕಡಿಮೆ ನಿಗದಿಯಾಗಿರುವುದರಿಂದ ರೈತರಿಗೆ ಬಹಳ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟ ಉಂಟಾಗಲಿದೆ. ಅಲ್ಲದೇ ಪ್ರಮುಖವಾಗಿ ಕುಟುಂಬ ನಿರ್ವಹಣೆ ದುಸ್ತರವಾಗಲಿದೆ. ಬೆಳೆ ಸಾಲ ತೀರಿಸಲು ಆಗದೆ ಸಂಕಷ್ಟಕ್ಕೆ ರೈತ ಒಳಗಾಗಲಿದ್ದಾನೆ.

  300x250 AD

  ಈ ಎಲ್ಲ ಕಾರಣಗಳಿಂದ ರೈತರು ಹಳಿಯಾಳ ತಾಲೂಕಿನಲ್ಲಿ ಕಳೆದ ವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಕಾರಣ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ರೈತರ ಬೆಂಬಲಕ್ಕೆ ನಿಂತು ರೈತರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top