ಹೊನ್ನಾವರ: ಪರೇಶ ಮೇಸ್ತಾ ಪ್ರಕರಣದಿಂದ ಕೋಮು ಬಣ್ಣ ಹಚ್ಚಿ ಅಧಿಕಾರಕ್ಕೆ ಬಂದ ಬಿಜೆಪಿ ಬಹಿರಂಗವಾಗಿ ಕ್ಷಮೆ ಕೇಳಲಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೇಶ ಪ್ರಕರಣ ಮುಂದಿಟ್ಟು, ಇದು ಕಾಂಗ್ರೆಸ್ ಬೆಂಬಲಿಗರು ಮಾಡಿದ ಕೊಲೆ ಎಂದು ಪ್ರಚಾರ ನಡೆಸಿ ಅಮಾಯಕರನ್ನು ಜೈಲಿಗೆ ಕಳುಹಿಸಿ ರಾಜಕೀಯ ಲಾಭ ಪಡೆದ ಬಿಜೆಪಿಯವರು ಸಮಾಜಕ್ಕೆ ತಪ್ಪು ಸಂದೇಶ ನೀಡಿದರು. ಧಾರ್ಮಿಕ ಅಮಲಿನಲ್ಲಿ ಇದೊಂದು ವ್ಯವಸ್ಥಿತ ಸಂಚು ಎಂದು ಗೂಬೆ ಕೂರಿಸಿದರು. ಸಿಓಡಿ ತನಿಖೆಗೆ ವಹಿಸಿದಾಗ ವಿಪಕ್ಷ ದಲ್ಲಿದ್ದ ಬಿಜೆಪಿ ನಂಬಿಕೆ ಇಲ್ಲ, ಕಾಂಗ್ರೇಸ್ ಪಕ್ಷದ ವ್ಯವಸ್ಥಿತ ಷಡಂತ್ಯ ಇದನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದಾಗ ಪ್ರಕರಣ ವರ್ಗಾಯಿಸಲಾಯಿತು. ನಾಲ್ಕು ವರ್ಷಧ ವಿಚಾರಣೆಯ ಬಳಿಕ ಸಿಬಿಐ ಈ ಪ್ರಕರಣದಲ್ಲಿ ಯಾವುದೇ ಪಕ್ಷ ವ್ಯಕ್ತಿಯ ಪಾತ್ರವಿಲ್ಲ. ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ವರದಿ ನೀಡಿದೆ. ಘಟನೆ ನಡೆದಾಗ ಕೋಮು ಪ್ರಚೋದನೆಯ ಮೂಲಕ ಕೆರಳಿಸಿ, ಜಿಲ್ಲೆಯಾದ್ಯಂತ ಕೋಮು ಗಲಭೆ ಎಬ್ಬಿಸಿ ರಾಜಕೀಯ ಲಾಭ ಪಡೆದು ಚುನಾವಣೆಯಲ್ಲಿ ನಿಂತು ನಾಲ್ಕು ಜನ ಶಾಸಕರಾಗಿ ಆಯ್ಕೆಯಾದರು. ಇದೀಗ ವರದಿಯು ಬಿ ರಿಪೋರ್ಟ ಬಂದಿದ್ದು, ನೈತಿಕ ಹೊಣೆ ಹೊತ್ತು ನಾಲ್ವರು ರಾಜೀನಾಮೆ ನೀಡಲಿ. ನ್ಯಾಯದ ತೀರ್ಪು ಬಿಜೆಪಿಯವರ ಪರವಾಗಿ ಬಂದಿಲ್ಲ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಕಾಂಗ್ರೇಸ್ ಪರೇಶ ಕುಟುಂಬದವರ ಒಪ್ಪಿಗೆ ಪಡೆದು ಮನೆಗೆ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳುವ ಕಾರ್ಯಕ್ಕೆ ಮುಂದಾಗಲಿದೆ ಎಂದರು.
ಭಾರತ ಜೋಡೋ ಯಾತ್ರೆ ೭ ದಿನಕ್ಕೆ ಪಾದಾರ್ಪಣೆ ಮಾಡಿದ್ದು, ರಾಜ್ಯದಲ್ಲಿ ನಾಲ್ಕು ದಿನದಿಂದ ನಿರೀಕ್ಷೆಗೂ ಮೀರಿ ಯಶಸ್ಸು ಸಿಗುತ್ತಿದೆ. ಜನರ ಉತ್ಸಾಹ ಸ್ವಾಗತಕೋರುವ ರೀತಿ ನೋಡಿದಾಗ ಮುಂದೆ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಹಾಗೂ ದೇಶದ ಪ್ರಧಾನಿ ರಾಹುಲ್ ಗಾಂಧಿಯಾಗುವುದು ನಿಶ್ಚಿತವಾಗಿದೆ. ಜಾತಿ ಧರ್ಮದ ಕಂದಕ ದೂರ ಮಾಡಿ ಎಲ್ಲರೂ ಒಗ್ಗೂಡಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆಯ ವೇಳೆ ಹಲವು ಸಂಕಷ್ಟವನ್ನು ಹಾಗೂ ನೊಂದವರ ಭೇಟಿಯಾಗಿ ಅವರ ಸಮಸ್ಯೆ ಅರಿಯುವ ಕಾಯಕದಲ್ಲಿ ಪಕ್ಷದ ನಾಯಕರು ತೊಡಗಿದ್ದಾರೆ. ಜಿಲ್ಲೆಯಿಂದ ೨೫ರಿಂದ ೩೦ ಸಾವಿರ ಪಕ್ಷದ ಕಾರ್ಯಕರ್ತರು ಭಾರತ ಜೋಡೋ ಯಾತ್ರೆಗೆ ತೆರಳಲು ಸಜ್ಜಾಗಿದ್ದು, ಅ.೧೨ರಂದು ಪಾಲ್ಗೊಳ್ಳಲಿದ್ದಾರೆ. ಇನ್ನು ಈ ಯಾತ್ರೆಯ ಬಗ್ಗೆ ಬಿಜೆಪಿಯವರು ತಡೆಯಲಾಗದ ನೋವು ಅನುಭವಿಸುತ್ತಿದ್ದಾರೆ. ನಾವು ಪಾದಯಾತ್ರೆ ನಡೆಸುತ್ತಿರುವುದನ್ನು ನೋಡಿ ಬಿಜೆಪಿಯವರು ಯಾತ್ರೆಗೆ ಮುಂದಾಗುತ್ತಿದ್ದು, ಅವರು ಕಾರಿನಲ್ಲಿ ಹೋಗಲು ಸಜ್ಜಾಗುತ್ತಿದ್ದಾರೆ. ಬಿಜೆಪಿಯ ಮಜಾ ಯಾತ್ರೆ ಮುಂದೆ ಆಗಮಿಸಲಿದೆ ಎಂದು ವ್ಯಂಗ್ಯವಾಡಿದರು.
ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಬಿಜೆಪಿ ಅಧಿಕಾರಕ್ಕೆ ಬಂದು ೪೦% ಕಮಿಷನ್ ಮೂಲಕ ಕುಖ್ಯಾತಿ ಗಳಿಸಿದ ಸರ್ಕಾರವಾಗಿದೆ. ಈ ಬಗ್ಗೆ ದೇಶದ ಪ್ರಧಾನಿ ರಾಜ್ಯದ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿಲ್ಲ. ಕಾಂಗ್ರೇಸ್ ಅವಧಿಯಲ್ಲಿ ೯ ಪ್ರಕರಣ ಸಿ.ಬಿ.ಇ ತನಿಖೆ ವಹಿಸಿದ್ದೆವು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾದ ಈಶರಪ್ಪನವರ ಮೇಲೆ ಆತ್ಮಹತ್ಯೆಗೆ ಪ್ರಚೋದನೆಯಂತಹ ಗಂಭೀರ ಆರೋಪ ಕೇಳಿ ಬಂದರೂ ಸಿಬಿಐ ನೀಡದೇ ೧ ತಿಂಗಳೊಳಗೆ ತನಿಖೆ ನಡೆಸಿ ಕ್ಲೀನ್ ಚೀಟ್ ನೀಡಿದ್ದೀರಿ. ಒಂದೊಮ್ಮೆ ಸಿಬಿಐ ತನಿಖೆ ನಡೆದರೆ ೮೦% ಮಂತ್ರಿಗಳು ಜೈಲು ಸೇರುತ್ತಿದ್ದರು ಎಂದು ಆರೋಪಿಸಿದರು. ಸಿಬಿಐ ನೀಡಿದ ವರದಿ ನಂಬಿಕೆ ಇಲ್ಲ ಎಂದಾದರೆ ಕೇಂದ್ರ ಸರ್ಕಾರಕ್ಕೆ ಆ ಸಂಸ್ಥೆಯನ್ನು ಮುಚ್ಚಲು ಹೇಳಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಶಾರದಾ ಶೆಟ್ಟಿ, ಮಂಕಾಳ ವೈದ್ಯ, ಸತೀಶ ಸೈಲ್, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತ ಗಾವಂಕರ್, ಬ್ಲಾಕ್ ಅಧ್ಯಕ್ಷರಾದ ಜಗದೀಪ ತೆಂಗೇರಿ, ವಿ.ಎಲ್.ನಾಯ್ಕ, ಗೋವಿಂದ ನಾಯ್ಕ, ಕಾಂಗ್ರೆಸ್ ಮುಖಂಡರಾದ ಮಂಜುನಾಥ ನಾಯ್ಕ, ಶಿವಾನಂದ ಹೆಗಡೆ ಮತ್ತಿತರರು ಇದ್ದರು.