• Slide
    Slide
    Slide
    previous arrow
    next arrow
  • ‘ಹುಬ್ಬಳ್ಳಿ- ಅಂಕೋಲಾ ರೈಲ್ವೆ: 25 ವರ್ಷಗಳ ಹಿಂದೆ ಅನುಮತಿ ನೀಡಿದ್ದೇಕೆ?’

    300x250 AD

    ಯಲ್ಲಾಪುರ: ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆಯನ್ನು ವಿರೋಧಿಸಿ ಸರಕಾರಕ್ಕೆ ಪತ್ರ ಬರೆದಿರುವ ಉತ್ತರ ಕರ್ನಾಟಕದ ನಿವೃತ್ತ ಅರಣ್ಯಾಧಿಕಾರಿಗಳ ಸಂಘದವರು, 25 ವರ್ಷಗಳ ಹಿಂದೆ ತಾವು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಈ ಯೋಜನೆಗೆ ಅನುಮತಿ ನೀಡಿದ್ದು ಏಕೆ? ಎಂದು ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಹೋರಾಟಗಾರ ರಾಮು ನಾಯ್ಕ ಪ್ರಶ್ನಿಸಿದ್ದಾರೆ.

    ನಿವೃತ್ತ ಅಧಿಕಾರಿಗಳು ಬರೆದಿರುವ ಪತ್ರದಲ್ಲಿ ರೈಲು ಹಾದು ಹೋಗಲಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬರುವ ದಟ್ಟಾರಣ್ಯದ ಬಗ್ಗೆ, ಅಲ್ಲಿನ ಜೀವ ಸಂಕುಲಗಳ ಬಗ್ಗೆ ತಮ್ಮ ಅತೀವ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಅವರ ಪರಿಸರ ಪ್ರೀತಿಗೆ ನಾವೂ ಸೆಲ್ಯೂಟ್ ಮಾಡುತ್ತೇವೆ. ಇಷ್ಟೆಲ್ಲ ಕಾಡು ನಾಶ, ಪರಿಸರ ನಾಶ, ಜೀವ ಸಂಕುಲಗಳ ನಾಶ ಆಗ ಗೊತ್ತಿರಲಿಲ್ಲವೇ? ಪ್ರಾರಂಭದಲ್ಲಿಯೇ ಯೋಜನೆ ನಿಲ್ಲಿಸಬಹುದಿತ್ತು. 1999ರಲ್ಲಿ ಆರಂಭವಾದ ಈ ಯೋಜನೆಯು ಮುಂದಿನ 6 ವರ್ಷಗಳ ಕಾಲ (ಹುಬ್ಬಳ್ಳಿಯಿಂದ ಕಲಘಟಗಿಯವರೆಗೆ) 25- 30 ಕಿ.ಮೀ.ವರೆಗೆ ಬೆಲೆ ಕಟ್ಟಲಾಗದ ನೈಸರ್ಗಿಕ ಅರಣ್ಯ ಪ್ರದೇಶ ತಮ್ಮ ಕಣ್ಣೆದುರೇ ಸರ್ವನಾಶ ಆಗುತ್ತಿದ್ದಾಗ, ತಮ್ಮದೇ ಇಲಾಖೆಯಿಂದ ಸಾವಿರಾರು ಗಿಡಮರಗಳನ್ನು ಕಡಿದು, ಆ ಸ್ಥಳದಲ್ಲಿ ರೈಲು ಹಳಿ ಹಾಕಲು ಅವಕಾಶ ಮಾಡಿಕೊಟ್ಟಿದ್ದಾರೆ. ರೈಲು ಯೋಜನೆಯ ಹೆಸರಿನಲ್ಲಿ ಸಾಮಾಜಿಕ ಅರಣ್ಯೀಕರಣದ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಸರಕಾರದ ಬೊಕ್ಕಸಕ್ಕೆ ಖರ್ಚು ಹಾಕುತ್ತಿರುವಾಗ ಆಗ ಎಲ್ಲಿ ಹೋಗಿತ್ತು ಇವರ ಪರಿಸರ ಪ್ರೀತಿ ಎಂದು ಸ್ಪಷ್ಟೀಕರಣ ಕೇಳಿದ್ದಾರೆ.

    300x250 AD

    ಆಗ ಕೆಲವರಿಗೆ ಪರಿಸರ ಕಾಳಜಿಗಿಂತ ಅವರವರ ಪರಿವಾರದ ಕಾಳಜಿಯೇ ಮುಖ್ಯವಾಗಿತ್ತು. ಈ ರೈಲು ಯೋಜನೆಗೆ ಆರಂಭದಲ್ಲಿಯೇ ಪರಿಸರ ಮಂತ್ರಾಲಯಗಳು, ಪರಿಸರ ಮಂಡಳಿಗಳು, ಅರಣ್ಯ ಇಲಾಖೆ ಇತ್ಯಾದಿಗಳು ಬ್ರೇಕ್ ಹಾಕಿದ್ದರೆ, 1999ರಲ್ಲಿ ಈ ಯೋಜನೆ ಜಾರಿಗೆ ಬರುತ್ತಿರಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಹುಬ್ಬಳ್ಳಿಯಿಂದ ಕಲಘಟಗಿಯವರೆಗೆ ಸಾವಿರಾರು ಮರಗಳ ಕಡಿತ, ಇಲ್ಲಿಯವರೆಗೆ ಸರಕಾರ ಖರ್ಚು ಮಾಡಿದ ನೂರಾರು ಕೋಟಿ ರೂ. ಯೋಜನಾ ವೆಚ್ಚ ಎಲ್ಲವೂ ಉಳಿಯುತ್ತಿತ್ತು. ಇಂತಹ ಕೆಲವು ದ್ವಿಮುಖಿಗಳೇ ಇದಕ್ಕೆಲ್ಲ ಮುಖ್ಯ ಕಾರಣೀಕರ್ತರೆಂದು ನಿಸ್ಸಂದೇಹವಾಗಿ ಹೇಳಬಹುದು. ಒಂದುವೇಳೆ ಪರಿಸರ ಕಾರಣದಿಂದ ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ ಸ್ಥಗಿತಗೊಂಡಿದ್ದೇ ಹೌದಾದರೆ, ಇಲ್ಲಿಯವರೆಗಿನ ಕಾಡಿನ ನಾಶಕ್ಕೆ ಸರಕಾರ ಮಾಡಿರುವ ನೂರಾರು ಕೋಟಿ ರೂ. ಯೋಜನಾ ವೆಚ್ಚಕ್ಕೂ ಇವರನ್ನೇ ಗುರಿ ಮಾಡಬೇಕು. ಸಂಪೂರ್ಣ ಖರ್ಚು ವೆಚ್ಚವನ್ನು ಈ ಜನರಿಂದಲೇ ವಸೂಲಿ ಮಾಡಲು ಸರಕಾರಕ್ಕೆ ಒತ್ತಾಯಿಸುವುದಾಗಿ ಹೇಳಿರುವ ಅವರು, ಹುಬ್ಬಳ್ಳಿ- ಅಂಕೋಲಾ ರೈಲು ಹೋರಾಟ ಸಮಿತಿಯ ಜಿಲ್ಲಾ ಘಟಕವೂ ಸಹ ಈ ಕುರಿತು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸುವ ಬಗ್ಗೆ ಚಿಂತನೆ ನಡೆಸಬೇಕು ಆಗ್ರಹಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top