Slide
Slide
Slide
previous arrow
next arrow

ವೈಭವದ ದಾಂಡೇಲಪ್ಪಾ ಜಾತ್ರೆ: ಹರಿದುಬಂದ ಭಕ್ತ ಸಾಗರ

300x250 AD

ದಾಂಡೇಲಿ: ವರ್ಷಕ್ಕೊಮ್ಮೆ ಬರುವ ಐತಿಹಾಸಿಕ ದಾಂಡೇಲಪ್ಪಾ ಜಾತ್ರೆಯು ಅಪಾರ ಜನ ಸಾಗರದ ಮಧ್ಯೆ ವೈಭವದಿಂದ ನೇರವೇರಿತು. ನಗರದಲ್ಲಿ ಎಲ್ಲ ಧರ್ಮಬಾಂಧವರಿಂದ ಆರಾಧಿಸಲ್ಪಡುವ ಪುರಮಾರು ಸತ್ಪುರುಷ ದಾಂಡೇಲಪ್ಪ ದೇವರು ತಾಲ್ಲೂಕಿನ ಭಕ್ತ ಜನರ ಇಷ್ಟಾರ್ಥಗಳನ್ನು ದಯಪಾಲಿಸುವುದಲ್ಲದೆ, ಸಂಕಷ್ಠಗಳನ್ನು ಪರಿಹರಿಸುವ ಆರಾಧ್ಯ ಮೂರ್ತಿಯು ಹೌದು. ಅಂದ ಹಾಗೆ ಅನೇಕತೆಯಲ್ಲಿ ಏಕತೆಯ ಸಂದೇಶವನ್ನು ಸಾರಲು ಕಾರಣವಾದ ಶ್ರೀಕ್ಷೇತ್ರ ದಾಂಡೇಲಪ್ಪಾ ಜಾತ್ರೆಯು ಜಿಲ್ಲೆಯಲ್ಲೇ ಹೆಸರುವಾಸಿಯಾದ ಜಾತ್ರೆಯಾಗಿದೆ.

ಬೆಳಿಗ್ಗೆ 4 ಘಂಟೆಯಿಂದಲೇ ನಗರ, ತಾಲ್ಲೂಕಿನ ಮತ್ತು ಜಿಲ್ಲೆಯ ನಾನಾ ಕಡೆಗಳಿಂದ ಭಕ್ತರು ದಾಂಡೇಲಪ್ಪ ಸನ್ನಿಧಿಗೆ ಆಗಮಿಸಿ ದರ್ಶನ ಪಡೆದು ದಾಂಡೇಲಪ್ಪನ ಕೃಪೆಗೆ ಪಾತ್ರರಾದರು. ಮುಂಜಾನೆ ನಗರದ ಮಿರಾಸಿ ಮನೆತನದಿಂದ ದಾಂಡೇಲಪ್ಪಾ ಸನ್ನಿಧಿಯವರೆಗೆ ಪಲ್ಲಕ್ಕಿ ಉತ್ಸವವು ನಡೆದು ನಂತರ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇಡೀ ದಾಂಡೇಲಿಯನ್ನು ಕಾಪಾಡುವ ಮಹಾ ಮಹಿಮೆಯಿರುವ ದಾಂಡೇಲಪ್ಪ ದೇವರ ಜಾತ್ರೆಯೆಂದರೆ ನಗರದ ಜನರಿಗೆ ಖುಷಿಯೇ ಖುಷಿ. ಹಳಿಯಾಳ ರಸ್ತೆಯಿಂದ ಹಿಡಿದು ದೇವಾಲಯದ ಮುಂಬಾಗದವರೆಗೆ ಅಂಗಡಿ ಮುಂಗಟ್ಟುಗಳು ತೆರೆದು ಭಕ್ತರನ್ನು ಆಕರ್ಷಸಿಸುತ್ತಿತ್ತಲ್ಲದೇ ಭರ್ಜರಿ ವ್ಯಾಪಾರದ ಭೇಟೆಯಲ್ಲಿ ವ್ಯಾಪಾರಿಗಳು ತೊಡಗಿದ್ದರು.

ಶಿಸ್ತಿನ ಜಾತ್ರೆಗೆ ಕಾರಣರಾದ ಪೊಲೀಸರು: ಪೋಲಿಸ್ ಉಪಾಧೀಕ್ಷಕ ಗಣೇಶ್.ಕೆ.ಎಲ್ ಅವರ ಸಾರಥ್ಯದಲ್ಲಿ ದಾಂಡೇಲಿಯ ವೃತ್ತ ನಿರೀಕ್ಷಕರಾದ ಬಿ.ಎಸ್.ಲೋಕಾಪುರ, ಕಾರವಾರದ ವೃತ್ತ ನಿರೀಕ್ಷಕರಾದ ಆನಂದಮೂರ್ತಿ ಹಾಗೂ ದಾಂಡೇಲಿ ಉಪ ವಿಭಾಗದ, ಉಪ ನಿರೀಕ್ಷಕರಲ್ಲದೇ, ಹೊರ ತಾಲೂಕುಗಳ ಪೊಲೀಸ್ ಉಪ ನಿರೀಕ್ಷಕರು, ದಾಂಡೇಲಿ ಉಪ ವಿಭಾಗ ಮತ್ತು ಜಿಲ್ಲೆಯ ವಿವಿದೆಡೆಗಳ ಪೊಲೀಸ್ ಸಿಬ್ಬಂದಿಗಳು, ಗೃಹರಕ್ಷಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಂಡೇಲಪ್ಪ ಜಾತ್ರೆಗೆ ವಿಶೇಷವಾದ ಭದ್ರತೆಯನ್ನು ಒದಗಿಸಿಕೊಟ್ಟು ಸಾರ್ವಜನಿಕರ ಪ್ರಶಂಸೆಗೆ ಮತ್ತು ಶಿಸ್ತಿನ ಜಾತ್ರೆಗೆ ಕಾರಣರಾದರು.

ಈ ಜಾತ್ರೆಯ ಪ್ರಯುಕ್ತ ನಗರದ ಹಳಿಯಳ ರಸ್ತೆಯ ಗಜಾನನ ಯುವಕ ಮಂಡಳದವರಿಂದ ಸಾರ್ವಜನಿಕ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶ್ರೀ.ಮಹೇಶ್ವರಿ ಪ್ರಗತಿ ಮಂಡಳದವರು ಭಕ್ತಾಭಿಮನಿಗಳಿಗೆ ನೀರು ಮತ್ತು ಬೆಲ್ಲ, ಉಪ್ಪಿಟ್ಟು ವಿತರಿಸಿದರೆ, ನಗರದ ಗೆಳೆಯರ ಬಳಗದವರು ಮಜ್ಜಿಗೆಯನ್ನು ವಿತರಿಸಿ ಭಕ್ತಾಭಿಮಾನಿಗಳ ಗಮನ ಸೆಳೆದರು. ಸತ್ಯಸಾಯಿ ಸಾಯಿ ಸೇವಾ ಸಮಿತಿಯಿವರು ಭಕ್ತಾದಿಗಳಿಗೆ ಬೆಲ್ಲ ಹಾಗೂ ತಂಪು ಪಾನೀಯವನ್ನು ವಿತರಿಸಿದರು. ಶ್ರೀ.ದಾಂಡೇಲಪ್ಪ ಬೃಹತ್ ಟ್ರಕ್ ಚಾಲಕರ ಸಂಘದವರು ನಗರದ ಕೆ.ಸಿ ವೃತ್ತದಲ್ಲಿ ತಂಪು ಪಾನೀಯವನ್ನು ವಿತರಿಸಿ ಸರ್ವರ ಶ್ಲಾಘನೆಗೆ ಪಾತ್ರರಾದರು.

300x250 AD

ಶ್ರೀ ದಾಂಡೇಲಪ್ಪಾ ಜಾತ್ರೋತ್ಸವ ಸಮಿತಿ, ಮಿರಾಶಿ ಮನೆತನ, ತಾಲ್ಲೂಕಾಡಳಿತ, ಆಲೂರು ಗ್ರಾಮ ಪಂಚಾಯ್ತಿ, ನಗರ ಸಭೆ, ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆ, ಲೋಕೋಪಯೋಗಿ ಇಲಾಖೆ, ಹೆಸ್ಕಾಂ ಸಹಕಾರದಲ್ಲಿ ದಾಂಡೇಲಪ್ಪ ಜಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಜಾತ್ರೋತ್ಸವದ ಯಶಸ್ಸಿಗೆ ಸಹಕರಿಸಿದ ಮಹನೀಯರನ್ನು ಶ್ರೀ ದಾಂಡೇಲಪ್ಪಾ ಜಾತ್ರೋತ್ಸವ ಸಮಿತಿ ವಿಶೇಷವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ವ್ಯಾಪಾರಿಗಳಿಗೆ ಭರ್ಜರಿ ಭೇಟೆ: ದಾಂಡೇಲಪ್ಪ ಜಾತ್ರೆಗೆ ಈ ವರ್ಷವು ಸಾಕಷ್ಟು ಅಂಗಡಿ ಮುಂಗಟ್ಟುಗಳು ಭಕ್ತರ ವiನಸೂರೆಗೊಳ್ಳುತ್ತಿದ್ದವು. ಭಕ್ತ ಜನರು ದೇವರ ದರ್ಶನ ಪಡೆದು ವಿವಿಧ ಅಂಗಡಿಗಳಿಗೆ ಹೋಗಿ ತಮಗೆ ಇಷ್ಟವಾದ ತಿಂಡಿ-ತಿನಿಸುಗಳನ್ನು ತಾವು ತಿಂದು ಜೊತೆಗೆ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರಲ್ಲದೆ ಇತರ ಆಟೋಟ ವಸ್ತುಗಳು, ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಒಟ್ಟಿನಲ್ಲಿ ಈ ಜಾತ್ರೆ ಭಕ್ತರಿಗೆ ಮಾತ್ರ ಜಾತ್ರೆಯಾಗದೇ, ವ್ಯಾಪಾರಿಗಳು ವ್ಯಾಪಾರದ ಜಾತ್ರೆಯಾಗಿತ್ತು.

Share This
300x250 AD
300x250 AD
300x250 AD
Back to top