ಭಟ್ಕಳ: ಡಾ.ಸೈಯದ್ ಝಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನವು ನೀಡುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಧಾರವಾಡದ ಡಾ.ಬಸು ಬೇವಿನಗಿಡದ ಅವರ ಕಥಾ ಸಂಕಲನ ‘ನೆರಳಿಲ್ಲದ ಮರ’ ಕೃತಿ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪಿ.ಆರ್.ನಾಯ್ಕ ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಬಂದ 16 ಕೃತಿಗಳಲ್ಲಿ ಬಸು ಬೇವಿನಗಿಡದ ಅವರ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಅ.16ರಂದು ಭಟ್ಕಳದಲ್ಲಿ ನಡೆಯಲಿದೆ. ಪ್ರಶಸ್ತಿಯು 5000 ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಬೆಂಗಳೂರಿನ ಪತ್ರಕರ್ತ ಪ್ರೇಮಕುಮಾರ ಹರಿಯಬ್ಬೆ, ಬಿ.ಎಮ್.ಹನೀಫ್ ಮತ್ತು ಅಂಕೋಲಾದ ಡಾ.ರಾಮಕೃಷ್ಣ ಗುಂದಿ ತೀರ್ಪುಗಾರರಾಗಿ ಸಹಕರಿಸಿದ್ದರು.