Slide
Slide
Slide
previous arrow
next arrow

ಸಂಸ್ಕಾರ,ಸಂಸ್ಕೃತಿ ಕಾಣೆಯಾಗುತ್ತಿರುವುದು ಆತಂಕಕಾರಿ ವಿಷಯ: ನ್ಯಾ.ತಿಮ್ಮಯ್ಯ

300x250 AD

ಸಿದ್ದಾಪುರ:ಪಟ್ಟಣದ ಲಯನ್ಸ್ ಬಾಲಭವನದಲ್ಲಿ ತಾಲೂಕು ನಿವೃತ್ತ ನೌಕರರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಇನ್ನತರ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಹಿರಿಯ ನಾಗರಿಕರ ದಿನಾಚರಣೆ ನಡೆಯಿತು.

ಕಾರ್ಯಕ್ರಮವನ್ನು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ. ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ಸಂದರ್ಭದಲ್ಲಿ ಹಿರಿಯರ ಕುರಿತಾಗಿನ ನಮ್ಮ ನಡವಳಿಕೆಗಳು ಆತಂಕಕಾರಿಯಾಗಿವೆ. ಕಷ್ಟಪಟ್ಟು ಬೆಳೆಸಿದ ಹಿರಿಯರನ್ನು ಮಕ್ಕಳು ವೃದ್ಧಾಶ್ರಮಕ್ಕೆ ಕಳುಹಿಸುವ ವಿಕೃತ ಮನಸ್ಥಿತಿ ಕಂಡುಬರುತ್ತಿದೆ. ಶಿಕ್ಷಣ ಹೆಚ್ಚುತ್ತಿದ್ದರೂ ಸಂಸ್ಕಾರ, ಸಂಸ್ಕೃತಿ ಕಾಣೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂವಿಧಾನದ ಮೂಲ ಆಶಯ ಈ ನೆಲದಲ್ಲಿಹುಟ್ಟಿದ ಪ್ರತಿಯೊಬ್ಬನಿಗೂ ಗೌರವ ದೊರೆಯಬೇಕು ಎನ್ನುವದು. ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ ಈ ಹಿಂದೆಯೇ ಬಂದಿದ್ದು ದೌರ್ಜನ್ಯಕ್ಕೆ ಒಳಗಾದ ಹಿರಿಯ ನಾಗರಿಕರು ಈ ಕಾಯ್ದೆಯ ಸೌಲಭ್ಯ ಪಡೆಯಬಹುದು. ಈ ಕಾಯ್ದೆಯ ಬಳಕೆ ಹೆಚ್ಚಾಗದಂತೆ ಇಂದಿನ ತಲೆಮಾರು ಹಿರಿಯರನ್ನು ಗೌರವಿಸುವ, ಮಕ್ಕಳು ಹೆತ್ತವರನ್ನು ಸಮರ್ಪಕವಾಗಿ ಪಾಲಿಸುವ ಮನೋಭಾವ ಬರಬೇಕಿದೆ ಎಂದರು.

ಸರಕಾರಿ ಸಹಾಯಕ ವಕೀಲ ಚಂದ್ರಶೇಖರ ಎಚ್.ಎಸ್. ಮಾತನಾಡಿ, ಹಿರಿಯರ ಮಾರ್ಗದರ್ಶನವಿದ್ದರೆ ಬದುಕು ಸುಂದರವಾಗಿರುತ್ತದೆ. ಅವರ ಹಾರೈಕೆ, ಸೂಕ್ತ ಸಲಹೆಗಳು ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತವೆ. ಹಿರಿಯರ ಕುರಿತಾದ ಅನಾದರ ಬೇಡ ಎಂದರು.

300x250 AD

ವಕೀಲರ ಸಂಘದ ಅಧ್ಯಕ್ಷ ಜಯರಾಮ ಜಿ.ಹೆಗಡೆ, ನಮ್ಮ ಸಾಂಸ್ಕೃತಿಕ ಅಧ:ಪತನಕ್ಕೆ ಸಾಕ್ಷಿ ಇಂದಿನ ವೃದ್ಧಾಶ್ರಮಗಳು. ಹಿರಿಯರ ಕುರಿತಾದ ಗೌರವ, ಕಾಳಜಿ ನಮ್ಮಲ್ಲಿರಬೇಕು ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ ಇಂದಿನ, ಮುಂದಿನ ತಲೆಮಾರಿಗೆ ಏನು ಅಗತ್ಯವಿದೆ ಅದನ್ನು ನೀಡುವಲ್ಲಿ ವಿಫಲತೆಯಾಗಿದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಅನೇಕ ರೀತಿಯಲ್ಲಿ ಪಾಲಕರಾದ ನಾವೂ ತಪ್ಪುತ್ತಿದ್ದೇವೆ. ಹಿರಿಯರ ಕುರಿತಾಗಿ ಹೊರಗಡೆ ಆಡುವ ಸ್ಲೋಗನ್‌ಗಳು ಮನೆಯೊಳಗೆ ಕೇಳಿಸುತ್ತಿಲ್ಲ. ಒಂದಕ್ಕೊಂದು ಸಂಬಂಧವಿಲ್ಲದ ನಡವಳಿಕೆಗಳಿಂದಾಗಿ ಜೀವನ ನಾಟಕದಂತಾಗಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಂ.ಪಾಟೀಲ, ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಮಾತನಾಡಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಎನ್.ವಿ.ಹೆಗಡೆ, ಎಂ.ಎಸ್.ಹೆಗಡೆ, ಡಿ.ಎನ್.ಶೇಟ್ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲಸಾಹಿತ್ಯ ಪ್ರಶಸ್ತಿ ಪುರಸ್ಕೃತ ತಮ್ಮಣ್ಣ ಬೀಗಾರರನ್ನು ಸನ್ಮಾನಿಸಲಾಯಿತು. ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸಿದರು.

Share This
300x250 AD
300x250 AD
300x250 AD
Back to top