• Slide
    Slide
    Slide
    previous arrow
    next arrow
  • ತಾಲೂಕು ಆಸ್ಪತ್ರೆಗೆ ಸಚಿವ ಪೂಜಾರಿ ಭೇಟಿ: ಪರಿಶೀಲನೆ

    300x250 AD

    ಕುಮಟಾ: ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ, ಆಸ್ಪತ್ರೆಯಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

    ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ್ದ ಸಚಿವ ಪೂಜಾರಿ ಅವರು ಶಾಸಕರ ವಿನಂತಿ ಮೇರೆಗೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಎಲ್ಲ ವಾರ್ಡಗಳಿಗೂ ತೆರಳಿ ಪರಿಶೀಲಿಸಿದ ಸಚಿವರಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಣೇಶ ನಾಯ್ಕ, ಡಯಾಲಿಸಿಸ್ ಯಂತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಆರು ಡಯಾಲಿಸಿಸ್ ಯಂತ್ರಗಳಿದ್ದು ಮೂರು ಯಂತ್ರ ಕಾರ್ಯ ನಿರ್ವಹಿಸುತ್ತಿದೆ. ಇನ್ನುಳಿದ ಮೂರು ಯಂತ್ರ ಕೆಟ್ಟಿದೆ. ಅದರ ನಿರ್ವಹಣೆಯನ್ನು ಸಂಜೀವಿನಿ ಕಂಪನಿ ಮಾಡುತ್ತಿತ್ತು. ಆದರೆ ಈಗ ನಿರ್ವಹಣೆಗೆ ಆ ಸಂಸ್ಥೆಯವರು ಬಾರದ ಕಾರಣ ತೊಂದರೆಯಾಗಿದೆ. ಕೇವಲ ಮೂರು ಯಂತ್ರದಿಂದ ಎಲ್ಲ ಪೇಶೆಂಟ್ ಗಳಿಗೂ ಚಿಕಿತ್ಸೆ ನೀಡುವುದು ತುಂಬಾ ಕಷ್ಟಕರವಾಗಿದೆ. ಆದರೆ ಶಾಸಕರು ಮೂರು ಯಂತ್ರಗಳನ್ನು ಕೊಡಸಿರುವುದರಿಂದ ನಮಗೆ ಅನುಕೂಲವಾಗಿದೆ ಎಂದು ತಿಳಿಸಿದರು.

    ಬಳಿಕ ಸಚಿವರು ಎಲ್ಲ ವೈದ್ಯರ ಸಭೆ ನಡೆಸಿ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿ ಡಯಾಲಿಸಿಸ್ ಯಂತ್ರದ ಸಮಸ್ಯೆ ಮಾತ್ರ ಇರುವುದರಿಂದ ಶೀಘ್ರವೇ ಹೊನ್ನಾವರ ಕ್ಕೆ ಹಾಗೂ ಕುಮಟಾಕ್ಕೆ ಹೊಸ ಡಯಾಲಿಸಿಸ್ ಯಂತ್ರ ನೀಡುವ ಬಗ್ಗೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಸಂಜೀವಿನಿ ಸಂಸ್ಥೆ ನಿರ್ವಹಣೆ ಮಾಡದೇ ಇರುವುದರಿಂದ ಪರ್ಯಾಯ ವ್ಯವಸ್ಥೆ ಬಗ್ಗೆ ಹಾಗೂ ಅದನ್ನು ಸರಿಪಡಿಸಿ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರಕುವಂತೆ ವ್ಯವಸ್ಥೆ ಮಾಡಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕರವರಿಗೆ ಸೂಚಿಸಿದರು.

    300x250 AD

    ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ಅತುಲ್ ಕಾಮತ್, ಡಾ.ಶ್ರೀನಿವಾಸ್ ನಾಯಕ ಹಾಗೂ ಇತರ ವೈದ್ಯರು ಸಿಬ್ಬಂದಿ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top