• Slide
    Slide
    Slide
    previous arrow
    next arrow
  • ಸಭಾಧ್ಯಕ್ಷರ ಮನೆ ಮುಂದೆ ಅರಣ್ಯವಾಸಿಗಳ ಬೃಹತ್ ಧರಣಿ: ಭೂಮಿ ಹಕ್ಕಿಗೆ ಆಗ್ರಹ

    300x250 AD

    ಶಿರಸಿ: ಅರಣ್ಯ ಸಿಬ್ಬಂದಿಗಳ ದೌರ್ಜನ್ಯದ ಕುರಿತು ಜಿಲ್ಲಾದ್ಯಂತ ಆಗಮಿಸಿದ ಅರಣ್ಯವಾಸಿಗಳಿಂದ ತೀವ್ರ ಆಕ್ರೋಶ, ಸಭಾಧ್ಯಕ್ಷರ ಮನೆ ಮುಂದೆ ಬೃಹತ್ ಧರಣಿ, ಸಭಾಧ್ಯಕ್ಷರ ಉತ್ತರಕ್ಕೆ ತೀವ್ರ ಅಸಮಧಾನ ಹಾಗೂ ಸುಫ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ಸರಕಾರಕ್ಕೆ 15 ದಿನ ಗಡವು ನೀಡುವುದೊಂದಿಗೆ ಬೃಹತ್ ಪ್ರತಿಭಟನೆ ಯಶಸ್ವಿಯಾಗಿ ಜರುಗಿದವು.

    ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಶಿರಸಿಯ ಬಿಡ್ಕಿಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆ ಸಾಮಾಜಿಕ ಹೋರಾಟಗಾರ ಕಾಗೋಡ ತಿಮ್ಮಪ್ಪ ಅವರು ಗಾಂಧಿಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸಭಾಧ್ಯಕ್ಷರ ಮನೆ ಮುಂದೆ ಧರಣಿಯಾಗಿ ಪರಿವರ್ತನೆಗೊಂಡಿತು.

    ಪ್ರತಿಭಟನೆಯಲ್ಲಿ ಪ್ರಧಾನ ಸಂಚಾಲಕರಾದ ಜಿ. ಎಮ್ ಶೆಟ್ಟಿ, ರಾಜ್ಯ ಸಂಚಾಲಕರಾದ ತಿ.ನ ಶ್ರೀನಿವಾಸ ಮೂರ್ತಿ, ಶಿರಸಿ ನಗರ ಅಧ್ಯಕ್ಷ ಪ್ರದೀಪ್ ಶೆಟ್ಟಿ, ರಾಘವೇಂದ್ರ ನಾಯ್ಕ, ವಿವಿಧ ತಾಲೂಕ ಅಧ್ಯಕ್ಷರಾದ ರಮಾನಂದ ನಾಯ್ಕ ಅಚಿವೆ ಅಂಕೋಲಾ, ಲಕ್ಷ್ಮಣ ಮಾಳ್ಳಕ್ಕನವರ ಶಿರಸಿ, ಶಿವಾನಂದ ಜೋಗಿ ಮುಂಡಗೋಡ, ಭೀಮ್ಸಿ ವಾಲ್ಮೀಕಿ ಯಲ್ಲಾಪುರ, ಸಾರಂಬಿ ಶೇಖ್, ಯಾಕೂಬ ಬೆಟ್ಕುಳಿ, ಇಬ್ರಾಹಿಂ ಗೌಡಳ್ಳಿ, ಸಿತಾರಾಮ ಗೌಡ ನೀರಗಾನ್, ಹರಿಶ್ಚಂದ್ರ ನಾಯ್ಕ ಓಂಕಾರ, ಶೇಖಯ್ಯ ಹಿರೇಮಠ, ಅನಂತ ಗೌಡ, ಶಬ್ಬೀರ್ ಚಪಾತಿ, ದೇವರಾಜ ಗೊಂಡ, ಪಾಂಡುರಂಗ ನಾಯ್ಕ ಬೆಳಕೆ, ಬಾಲಚಂದ್ರ ಶೆಟ್ಟಿ, ರಿಜವಾನ್, ಸುಭಾಶ್ ಗಾವಡಾ ಜೋಯಿಡಾ, ಸ್ವಾಮಿ ಉಳವಿ ಮುಂತಾದವರು ನೇತ್ರತ್ವ ವಹಿಸಿದ್ದರು.

    ಸಭಾಧ್ಯಕ್ಷರ ಉತ್ತರಕ್ಕೆ ಆಕ್ಷೇಪ : ಅರಣ್ಯವಾಸಿಗಳ ಹಕ್ಕು ನೀಡುವ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸುವ ದಿಶೆಯಲ್ಲಿ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಸರಕಾರದ ಪರವಾಗಿ ನೀಡಿದ ಉತ್ತರವು ಸ್ಪಷ್ಟತೆಗೆ ಆಗ್ರಹಿಸಿ ಧರಣಿ ಸಂದರ್ಭದಲ್ಲಿ ಅರಣ್ಯವಾಸಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

    ಪೋಲಿಸರೊಂದಿಗೆ ಚಕಮಕಿ :  ಸಭಾಧ್ಯಕ್ಷರು ಧರಣಿ ನಿರತ ಅರಣ್ಯವಾಸಿಗಳಿಗೆ ಸಮಜಾಯಿಸಿ ನೀಡುವ ಸಂದರ್ಭದಲ್ಲಿ ಪೋಲೀಸ್ ಅಧಿಕಾರಿ ಅರಣ್ಯವಾಸಿಗಳ ಮಾತನ್ನ ನಿಯಂತ್ರಿಸುವ ಪ್ರಯತ್ನದಲ್ಲಿದ್ದಾಗ ಹೋರಾಟಗಾರರಿಗೂ ಮತ್ತು ಪೋಲೀಸ್ ಅಧಿಕಾರಿಯೊಂದಿಗೆ ಮಾತಿನ ಚಕಮಕಿ ಘಟನೆ ಜರುಗಿದವು.

    300x250 AD

    ಕಾಗೋಡರ ವ್ಯಾಖ್ಯಾನ:  ದೇಶದ ಇತಿಹಾಸದಲ್ಲಿ ಸ್ವಾತಂತ್ರದ ಸಂಗ್ರಾಮದಿಂದ ಭೂ ಸುಧಾರಣೆ ಕಾಯಿದೆ ಬರುವವರೆಗೂ ನಿರಂತರ ಹೋರಾಟದಿಂದ ಯಶಸ್ವಿಗೊಳ್ಳಲು ಕಾರಣವಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಪ್ರದರ್ಶಿಸದಿದ್ದಲ್ಲಿ ಜನ ಬಂಡೆಳುವುದರಲ್ಲಿ ಸಂಶಯವಿಲ್ಲ. ಹೋರಾಟ ತೀವ್ರ ಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಸಾಮಾಜಿಕ ಹೋರಾಟಗಾರ ಕಾಗೋಡ ತಿಮ್ಮಪ್ಪ ಅವರು ಹೇಳಿದರು.

    ಸರಕಾರಕ್ಕೆ 15 ದಿನಗಳ ಗಡವು:  ಸಭಾಧ್ಯಕ್ಷರ ಉತ್ತರಕ್ಕೆ ಸಮಾಧಾನವಾಗದ ಅರಣ್ಯವಾಸಿಗಳು ಧರಣಿ ಮುಂದುವರೆಸಿ, ಸರಕಾರವು ಮುಂದಿನ 15 ದಿನಗಳಲ್ಲಿ ಅರಣ್ಯವಾಸಿಗಳ ಪರವಾದ ನಿರ್ಣಯ ತೆಗೆದುಕೊಳ್ಳದಿದ್ದಲ್ಲಿ ಜಿಲ್ಲೆಗೆ ಆಗಮಿಸುವ ಎಲ್ಲಾ ಸಚಿವರನ್ನು ಮುತ್ತಿಗೆ ಹಾಕುವುದೊಂದಿಗೆ ಜಿಲ್ಲಾದ್ಯಂತ ತೀವ್ರ ಹೋರಾಟ ಕೈಗೊಳ್ಳಲಾಗುವುದೆಂದು ಇಂದಿನ ಪ್ರತಿಭಟನೆಯ ಅಂತ್ಯದಲ್ಲಿ ನಿರ್ಣಯಿಸಲಾಯಿತು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

      ಗಾಂಧಿ ವೇಶದಲ್ಲಿ ಮೆರವಣಿಗೆ ಮತ್ತು ಸಭೆಯಲ್ಲಿ ಭಾಗವಹಿಸಿದ ಶಿರಸಿ ನಿವಾಸಿ ಸುರೇಶ್ ಅವರು ಇಂದಿನ ಕಾರ್ಯಕ್ರಮದ ಆಕರ್ಷಿತವಾಗಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top