• Slide
    Slide
    Slide
    previous arrow
    next arrow
  • ಸ್ವಚ್ಛತೆ ಇಲ್ಲದಿದ್ದರೆ ಕಾಯಿಲೆಗಳು ತಪ್ಪಿದ್ದಲ್ಲ: ಸಿಇಒ ಪ್ರಿಯಾಂಗಾ

    300x250 AD

    ಕಾರವಾರ: ಜಿಲ್ಲಾ ಪಂಚಾಯತ ಉ.ಕ.ಮತ್ತು ತಾಲೂಕು ಪಂಚಾಯತ ಅಂಕೋಲಾ ಹಾಗೂ ಗ್ರಾಮ ಪಂಚಾಯತ ಅವರ್ಸಾ ಇವರ ಸಂಯುಕ್ತ ಆಶ್ರಯದಲ್ಲಿ ಅವರ್ಸಾದಲ್ಲಿ ಆಯೋಜಿಸಲಾದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ. ಚಾಲನೆ ನೀಡಿದರು.

    ನಂತರ ಮಾತನಾಡಿ, ನಮ್ಮಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವದು ಎಲ್ಲರ ಕರ್ತವ್ಯ ಸ್ವಚ್ಛತೆ ಇಲ್ಲದೆ ಇದ್ದರೆ ಕಾಯಿಲೆಗಳು ಪ್ರತಿಯೊಬ್ಬರಿಗೂ ಬಾಧಿಸುತ್ತವೆ ಎಂದು ಹೇಳಿದರು.

    ಸಾರ್ವಜನಿಕರು ತಮ್ಮಮನೆಯಷ್ಟೇ ಸ್ವಚ್ಛವಾಗಿದ್ದರೆ ಸಾಕು ಎನ್ನುವ ಮನಸ್ಥಿತಿಯನ್ನು ಬಿಡಬೇಕು. ನಮ್ಮಸುತ್ತಲಿನ ಪರಿಸರವೂ ಚೆನ್ನಾಗಿರಬೇಕು.ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಹಾಕದಂತೆ ಎಲ್ಲರೂ ಎಚ್ಚರ ವಹಿಸಬೇಕು. ಸರಕಾರದ ಸ್ವಚ್ಛತಾ ಅಭಿಯಾನ ಗ್ರಾಮ ಪಂಚಾಯತದ ಜೊತೆಗೆ ಜನರ ಸಹಭಾಗಿತ್ವವೂ ಅತೀ ಮುಖ್ಯ ಅಲ್ಲದೆ ಪ್ಲಾಸ್ಟಿಕ್ ತ್ಯಜಿಸಲು ಪ್ರತಿಯೊಬ್ಬರೂ ಪಣ ತೊಡಬೇಕು. ಪ್ಲಾಸ್ಟಿಕ್ ಸುಡುವದರಿಂದ ಶ್ವಾಸಕೋಶದ ಗಂಭೀರ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ ಎಂದರು.

    300x250 AD

    ಅವರ್ಸಾದ ಗ್ರಾಮ ಪಂಚಾಯತ ಬಳಿಯಿಂದ ಗ್ರಾ.ಪಂ.ಸದಸ್ಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರೊಂದಿಗೆ ಪರಿಸರ ಜಾಥಾ ಜಾಗೃತಿ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಸ್ತೆ ಹಾಗೂ ಗಟಾರುಗಳ ನ ಸ್ವಚ್ಛಗೊಳಿಸಲಾಯಿತು. ಕೆಲವು ಅಂಗಡಿಗಳ ಮುಂದಿನ ಖಾಲಿ ಜಾಗಗಳಲ್ಲಿ ರಾಶಿ ರಾಶಿ ಕಸ ಕಂಡುಬಂದಿದ್ದು ಅಲ್ಲಿ ಹಾಗೂ ಚರಂಡಿಗಳಲ್ಲೂ ಕಸವನ್ನು ಹಾಕುತ್ತಿರುವವರ ವಿರುದ್ಧ ಕ್ರಮ ಜರುಗಿಸಿ ಎಂದು ಗ್ರಾ. ಪಂ. ಅಧ್ಯಕ್ಷರಿಗೆ ಸೂಚಿಸಿದರು.ಅಂಗಡಿ ಮಾಲಕರನ್ನು ಕರೆದು ಯಾಕೆ ಈ ರೀತಿ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

    ಈ ವೇಳೆ ಅಮದಳ್ಳಿ ಗ್ರಾ. ಪಂ. ಕಾರ್ಯದರ್ಶಿ ನಾಗೇಂದ್ರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಸ್ವಚ್ಛತೆಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಿ. ವೈ. ಸಾವಂತ, ಅವರ್ಸಾ ಗ್ರಾ.ಪಂ. ಅಧ್ಯಕ್ಷೆ ಸಾರಾ ಕುಟ್ಟಿನೋ, ಉಪಾಧ್ಯಕ್ಷೆ ಅಕ್ಷತಾ ನಾಯ್ಕ, ಮಾರುತಿ ನಾಯ್ಕ, ರಾಜೇಶ ನಾಯ್ಕ, ನಾಗರಾಜ ಭಟ್, ಸಹನಾ ಆಗೇರ, ಸವಿತಾ ಆಗೇರ, ಶಿಲ್ಪಾನಾಯ್ಕ ಮುಂತಾದವರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top