ಸಿದ್ದಾಪುರ: ತಾಲೂಕಿನ ಕಿಬ್ಬಳ್ಳಿಯ ಶ್ರೀ ಮಹಾಗಣಪತಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣ ಗಾಂಧಿ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಜಿ.ವಿ ಹೆಗಡೆಯವರು ಪುಷ್ಪಾರ್ಚನೆಯನ್ನು ಸಲ್ಲಿಸಿ ಮಾತನಾಡಿ ಗಾಂಧಿ ಹಾಗೂ ಶಾಸ್ತ್ರೀಜೀಯವರ ಮೌಲ್ಯ ಸಾರ್ವಕಾಲಿಕವಾಗಿದೆ, ಇದು ಸದಾ ಅನುಕರಣೀಯ ಎಂದು ಹೇಳಿದರು. ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ನಂತರದಲ್ಲಿ ಶ್ರಮದಾನ ಕಾರ್ಯಕ್ರಮ ನೆರವೇರಿಸಲಾಯಿತು.
ಕಿಬ್ಬಳ್ಳಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣ ಗಾಂಧಿ ಜಯಂತಿ ಆಚರಣೆ
