• Slide
    Slide
    Slide
    previous arrow
    next arrow
  • ಮುಗಿಯದ ಹೆದ್ದಾರಿ; ವಾಹನ ಸವಾರರಿಗೆ ಪರದಾಟ

    300x250 AD

    ಕುಮಟಾ: ಚತುಷ್ಪಥ ಹೆದ್ದಾರಿಯ ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್‌ಬಿ ಕಂಪನಿ ಕಾಮಗಾರಿ ಮುಗಿಸದೇ ಇರುವುದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಚತುಷ್ಪಥ ಹೆದ್ದಾರಿಯು ಅರ್ಧಂಬರ್ಧ ನಿರ್ಮಾಣವಾಗಿದ್ದು, ಈ ಕಾಮಗಾರಿಯು ಮುಗಿಯುವುದು ಯಾವಾಗ ಎಂಬ ಪ್ರಶ್ನೆ ಉದ್ಭವವಾಗಿದೆ. ಹೆದ್ದಾರಿಯು ಕೆಲವು ಕಡೆ ಫೋರ್ ಪ್ಲೇ ನಿರ್ಮಾಣವಾಗಿದೆ. ಆದರೆ ಎಷ್ಟೋ ಕಡೆಗಳಲ್ಲಿ ಇನ್ನೂ ಟು ವೇ ರಸ್ತೆಯು ಹಾಗೆಯೇ ಉಳಿದುಕೊಂಡಿದೆ. ಕುಮಟಾ ಪಟ್ಟಣದಲ್ಲಂತೂ ಕಾಮಗಾರಿಯನ್ನೂ ಇನ್ನೂವರೆಗೂ ಕೈಗೆತ್ತಿಕೊಂಡಿಲ್ಲ. ಕೆಲವು ಕಡೆಗಳಲ್ಲಿ ಫೋರ್ ಪ್ಲೇ ನಿರ್ಮಾಣವಾಗಿರುವುದರಿಂದ ಬೇರೆ ಊರಿನ ವಾಹನಗಳು ವೇಗವಾಗಿ ಬಂದಿರುತ್ತವೆ. ಆದರೆ ಅಲ್ಲಲ್ಲಿ ಟು ಪ್ಲೇ ನ ಒಂದೇ ರಸ್ತೆಯಿದ್ದು, ಡೈವರ್ಶನ್ ನೀಡಲಾಗಿದೆ.ಇದರಿಂದಾಗಿ ವೇಗವಾಗಿ ಬರುವ ವಾಹನಗಳು ವೇಗವನ್ನು ನಿಯಂತ್ರಿಸಲಾಗದೇ ಅಪಘಾತಗೊಳಗಾಗುವ ಸಾಧ್ಯತೆಯೇ ಹೆಚ್ಚಿದೆ. ಅದಲ್ಲದೇ ತಿರುವುಗಳನ್ನು ಕೂಡ ವಾಹನದ ವೇಗಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ನಿರ್ಮಾಣ ಮಾಡದೇ ಇರುವುದರಿಂದ ಈ ಭಾಗದಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.

    300x250 AD

    ಕುಮಟಾ ತಾಲೂಕಿನ ಸುಮಾರು 30 ಕಿ. ಮೀ ವ್ಯಾಪ್ತಿಯಲ್ಲಿ ವಾರದಲ್ಲಿ ಒಂದೆರಡು ಭೀಕರ ಅಪಘಾತಗಳು ನಡೆಯುತ್ತಿದ್ದರೆ, ಪ್ರತಿದಿನವೂ ಚಿಕ್ಕ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ ಎಂದು ಸ್ಥಳೀಯರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top