ಶಿರಸಿ; ನಗರದ ಲಯನ್ಸ್ ಸಭಾಂಗಣದಲ್ಲಿ ಸೆ.30, ಶುಕ್ರವಾರದಂದು ಶಿರಸಿ ಲಿಯೋ ಕ್ಲಬ್ ನಿಂದ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ಅತ್ಯಂತ ಅವಶ್ಯಕತೆ ಇರುವಂತಹ, ಕಡು ಬಡತನದ ಹಿನ್ನೆಲೆಯ ವ್ಯಕ್ತಿಗಳನ್ನು ಗುರುತಿಸಿ, ತಿಂಗಳಿಗೆ ಒಬ್ಬರಂತೆ ಆಹಾರ ವಿತರಿಸುವ ಯೋಜನೆಯನ್ನು ಶಿರಸಿ ಲಿಯೋ ಕ್ಲಬ್ ಹಮ್ಮಿಕೊಂಡಿದ್ದು.. ಐದು ಐದು ಲಿಯೋಗಳ ಗುಂಪುಗಳನ್ನು ರಚಿಸಿಕೊಂಡು ತಿಂಗಳಿಗೆ ಒಬ್ಬರು ವ್ಯಕ್ತಿಗಳಿಗೆ ಆಹಾರ ಕಿಟ್ ವಿತರಿಸುತ್ತಿದ್ದಾರೆ. ಪದಾಧಿಕಾರಿಗಳು ಮತ್ತು ಇತರ ಸದಸ್ಯರುಗಳಿಂದ ಸಂಗ್ರಹಿಸಲ್ಪಟ್ಟ ನಿಧಿಯಿಂದ ಒಂದು ಸಾವಿರ ರೂ. ಮೌಲ್ಯದ ಆಹಾರ ವಸ್ತುಗಳ ಸಂಗ್ರಹಣಾ ಕಿಟ್ ನೀಡಲಾಗುತ್ತಿದೆ. ಲಿಯೋ ಆದಿತ್ಯ ಮತ್ತು ಇತರೆ ಲಿಯೋಗಳಿಂದ ಜುಲೈ ತಿಂಗಳ ಆಹಾರ ಕಿಟ್, ಲಿಯೋ ವಿನಾಯಕ ಮತ್ತು ಇತರ ಲಿಯೋಗಳಿಂದ ಅಗಸ್ಟ್ ತಿಂಗಳ ಆಹಾರ ಕಿಟ್, ಲಿಯೋ ವಾಸವಿ ಹಾಗೂ ಇತರೆ ಲಿಯೋಗಳಿಂದ ಸೆಪ್ಟೆಂಬರ್ ತಿಂಗಳ ಆಹಾರ ಕಿಟ್ ನೀಡಲಾಯಿತು. ಇದೇ ಸಂದರ್ಭದಲ್ಲಿ ಲಿಯೋಗಳಿಗೆ ಲಿಯೋ ಪಿನ್ ವಿತರಿಸಲಾಯಿತು. ಲಿಯೋ ಕ್ಲಬ್ಬಿನ ಅಡ್ವೈಸರ್ ಆದ ಲಯನ್ ಅಶ್ವಥ್ ಹೆಗಡೆ ಅವರು ಉಪಸ್ಥಿತರಿದ್ದು , ಮಾತನಾಡಿ, ಸಮಾಜ ಸೇವಾ ಮನೋಭಾವ ಬೆಳೆಸುವ ಹಿನ್ನೆಲೆಯಲ್ಲಿ ಲಿಯೋ ಸದಸ್ಯರುಗಳಿಂದ ಇಂತಹ ಚಿಕ್ಕ ಚಿಕ್ಕ ಚಟುವಟಿಕೆಗಳನ್ನು ನಡೆಸುವ ಉದ್ದೇಶವನ್ನು ತಿಳಿಸಿಕೊಟ್ಟರು.
ಶಾಲೆಯ ಮುಖ್ಯಾಧ್ಯಾಪಕ ಶಶಾಂಕ್ ಹೆಗಡೆ ಅವರು ಮಾತನಾಡಿ ಅವಶ್ಯಕತೆ ಇರುವವರಿಗೆ ಕೈಲಾದ ಈ ರೀತಿಯ ಸಹಾಯ ಮಾಡುವ ಈ ಸಮಾಜಮುಖೀ ಚಟುವಟಿಕೆಯು ಕ್ಲಬ್ನಿಂದ ನಡೆಯುತ್ತಿರುವುದು ಇತರರಿಗೆ ಮಾದರಿಯೂ, ಶ್ಲಾಘನೀಯವೂ ಆಗಿರುವಂಥದ್ದಾಗಿದೆ ಎನ್ನುವುದನ್ನು ಮನಮುಟ್ಟುವಂತೆ ತಿಳಿಸಿದರು. ಲಿಯೋ ಕ್ಲಬ್ಬಿನ ಅಧ್ಯಕ್ಷೆ ಲಿಯೋ ಅನನ್ಯ ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಶ್ರೇಯಾ ಬಡಿಗೇರ್ ವಂದಿಸಿದರು.ಲಿಯೋ ಕೋ ಆರ್ಡಿನೇಟರ್ ಶ್ರೀಮತಿ ಸೀತಾ ವಿಶ್ವೇಶ್ವರ ಭಟ್, ಲಿಯೋ ಕ್ಲಬ್ಬಿನ ಇತರ ಸದಸ್ಯರುಗಳು ಉಪಸ್ಥಿತರಿದ್ದರು.
ಶಿರಸಿ ಲಿಯೋ ಕ್ಲಬ್ ನಿಂದ ಆಹಾರ ಕಿಟ್ ವಿತರಣೆ
