ಶಿರಸಿ: ನಗರದ ನಾಡಿಗಗಲ್ಲಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 93ನೇ ವರ್ಷದ ಅಖಂಡ ಭಜನಾ ಸೇವೆ ನಡೆಯುತ್ತಿದೆ.
ಪ್ರತಿ ವರ್ಷದಂತೆ ನವರಾತ್ರಿ ಪ್ರಯುಕ್ತ ಅಖಂಡ ಭಜನೆ,ಮರಾಠಿ ಅಭಂಗ್ ಮತ್ತು ದಾಸವಾಣಿ ಕಾರ್ಯಕ್ರಮವು ಅ.1 ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾಗಿದ್ದು,ಅ.2 ಬೆಳಿಗ್ಗೆ 6ಗಂಟೆಯವರೆಗೆ ನಡೆಯಲಿದೆ.
ಅ.1 ರಾತ್ರಿ 10 ಗಂಟೆಯಿಂದ ರಾಷ್ಟ್ರಮಟ್ಟದ ಆಕಾಶವಾಣಿ ಕಲಾವಿದೆ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ ವಿ.ತೇಜಸ್ವಿನಿ ವೆರ್ಣೇಕರ್ ಕಲ್ಕತ್ತಾ ಇವರಿಂದ ಕಾರ್ಯಕ್ರಮ ನಡೆಯಲಿದೆ.
ಅಂತೆಯೇ ರಾತ್ರಿ 12 ಗಂಟೆಯಿಂದ ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ ವಿ.ವಸುಧಾ ಶರ್ಮಾ ಸಾಗರ ಇವರಿಂದ ಕಾರ್ಯಕ್ರಮ ನಡೆಯಲಿದೆ.
ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಡಿಗಗಲ್ಲಿ ಆಂಜನೇಯ ದೇವಸ್ಥಾನದಲ್ಲಿ ಖ್ಯಾತ ಗಾಯಕಿಯರಿಂದ ಭಜನಾ ಸೇವೆ
