ಶಿರಸಿ: ನವರಾತ್ರಿ ಉತ್ಸವದ ಅಂಗವಾಗಿ ತಾಲೂಕ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ನಗರದ ಅಪೋಲೋ ಹೋಟೆಲ್ ಸಭಾಭವನದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಬೆಳಗ್ಗೆ 10:30ಕ್ಕೆ ಶ್ರೀ ಜಗದಂಬಾ ಅಂಬಾ ಭವಾನಿ ಮಾತೆಯ ಮಹಾಪೂಜೆಯ ನಂತರ 12 ಗಂಟೆಗೆ ಧಾರ್ಮಿಕ ಹಾಗೂ ಸಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ನಗರಸಭಾ ಅಧ್ಯಕ್ಷ ಗಣಪತಿ ನಾಯ್ಕ, ಆಗಮಿಸಿ ಹಿತನುಡಿಗಳನ್ನಾಡಿದರು ಮುಖ್ಯ ಅತಿಥಿಗಳಾಗಿ ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ್ ಸಾಗರ, ನಗರ ಸಭೆ ಉಪಾಧ್ಯಕ್ಷೆ ಶ್ರೀಮತಿ ವೀಣಾ ಶೆಟ್ಟಿ ಹಾಜರಿದ್ದರು ಸಭೆಯ ಅಧ್ಯಕ್ಷತೆಯನ್ನು ಗುರುನಾಥ್ ಕಲಬುರ್ಗಿ ಅಧ್ಯಕ್ಷರು ಎಸ್. ಎಸ್. ಕೆ. ಸಮಾಜ ಶಿರಸಿ ವಹಿದ್ದರು ವೇದಿಕೆಯಲ್ಲಿ ಸಮಾಜದ ಕಾರ್ಯದರ್ಶಿಗಳಾದ ಲಕ್ಷ್ಮಣಸಾ ಕಲಬುರ್ಗಿ, ಖಜಾಂಚಿಗಳಾದ ಶ್ರೀನಿವಾಸ್ ಬಾಕಳೆ ಮಾಜಿ ಅಧ್ಯಕ್ಷರಾದ ರುಕ್ಮಸಾ ಲದ್ವಾ, ಪ್ರಮುಖರಾದ ರಾಮಸಾ ಲದ್ವಾ, ಅಶೋಕ ಹಬೀಬ್ ಹಾಗೂ ಸಮಾಜದ ಗಣ್ಯರು ಬಂಧುಗಳು ಆಗಮಿಸಿದ್ದರು. ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು ಮನರಂಜನೆ ಅಂಗವಾಗಿ ಮಹಿಳೆಯರು ಯುವಕರು ಹಾಗೂ ಮಕ್ಕಳಿಗಾಗಿ ವಿವಿಧ ಆಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ವಿಶೇಷವಾಗಿ ದಾಂಡಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.