Slide
Slide
Slide
previous arrow
next arrow

ಗಾಂಧಿ ಜಯಂತಿಯಂದು ಸಭಾಧ್ಯಕ್ಷರ ಮನೆ ಎದುರು ಧರಣಿ: ರವೀಂದ್ರ ನಾಯ್ಕ

300x250 AD

ಯಲ್ಲಾಪುರ: ಗಾಂಧಿ ಜಯಂತಿಯಾದ ಅಕ್ಟೋಬರ್ 2 ರಂದು ಶಿರಸಿಯಲ್ಲಿ ಬೃಹತ್ ಮೆರವಣಿಗೆಯೊಂದಿಗೆ ವಿಧಾನ ಸಭಾಧ್ಯಕ್ಷರ ಮನೆ ಎದುರು ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

  ಅವರು ಯಲ್ಲಾಪುರ ತಾಲೂಕ ಪಂಚಾಯತ ಸಭಾಂಗಣದಲ್ಲಿ ಅರಣ್ಯ ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

  ಅಧಿವೇಶನದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಚರ್ಚಿಸಿ ಸುಪ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕೆಂಬ ಹೋರಾಟಗಾರರ ವೇದಿಕೆಯು ಕಳೆದ ನಾಲ್ಕು ಅಧಿವೇಶನದಿಂದಲೂ ಅಗ್ರಹಿಸಿದ ಬೇಡಿಕೆ ನಿರ್ಲಕ್ಷಿಸಿದ ಸರಕಾರದ ಕ್ರಮವನ್ನು ಖಂಡಿಸಿ ಸರಕಾರದ ಮೇಲೆ ಹೇಚ್ಚಿನ ಒತ್ತಡ  ಹೇರುವ ಉದ್ದೇಶದಿಂದ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು  ಅವರು ಹೇಳಿದರು.

  ಅರಣ್ಯ ಹಕ್ಕು ಕಾಯಿದೆಯಲ್ಲಿ ತೀರಸ್ಕಾರವಾಗಿರುವ ಅರಣ್ಯ ಅತಿಕ್ರಮಣದಾರರನ್ನ ಒಕ್ಕಲೆಬ್ಬಿಸಬೇಕೆಂದು ಪರಸರ ವಾದಿವಾಗಳು ಸುಫ್ರೀಂ ಕೋರ್ಟನಲ್ಲಿ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ರಾಜ್ಯ ಸರಕಾರವು ತೀರಸ್ಕಾರವಾಗಿರುವ ಅತಿಕ್ರಮಣದಾರರನ್ನ ಹಂತಹಂತವಾಗಿ ಒಕ್ಕಲೆಬ್ಬಿಸಲಾಗುವುದೆಂದು ಪ್ರಮಾಣ ಪತ್ರ ಸಲ್ಲಿಸಿರುವುದು ವಿಷಾದಕರ. ರಾಜ್ಯ ಸರಕಾರವು ಶೀಘ್ರದಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕೆಂದು ರವೀಂದ್ರ ನಾಯ್ಕ ಆಗ್ರಹಿಸಿದರು.

300x250 AD

ತೀವ್ರ ಆಕ್ರೋಶ : ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಸರಕಾರ ಸಂಪೂರ್ಣ ವೈಫಲ್ಯವಾಗಿದ್ದು, ಅರಣ್ಯವಾಸಿಗಳಿಗೆ ಹಕ್ಕು ದೊರೆಯದೇ ಇರುವುದರಿಂದ, ಸೌಲಭ್ಯದಿಂದ ಅತಿಕ್ರಮಣದಾರರು ವಂಚಿತರಾಗಿದ್ದಲ್ಲದೇ, ಜನಪ್ರತಿನಿಧಿಗಳು ಹಕ್ಕು ಕೊಡುವಲ್ಲಿ ವಿಫಲರಾಗಿದ್ದಾರೆ, ಪದೇ ಪದೇ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ ನಿಯಂತ್ರಿಸುವಲ್ಲಿ ಸರಕಾರ ವಿಫಲಾಗಿದೆ ಎಂದು ಧುರೀಣರಾದ ಫಕೀರಪ್ಪ ವಡ್ಡರ್, ಅನಂತ ಗೌಡ, ನರಸಿಂಹ ನಾಯ್ಕ, ವಾಸುದೇವ ಶೆಟ್ಟಿ, ಗೋಪಾಲ ಗೌಡ, ಪ್ರಮಿಳಾ, ಪಿಸಿ ಗಾಂವಕರ ಹೇಳಿದರು.

  ತಾಲೂಕ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮಾಚಣ್ಣ ಹೆಗಡೆ, ರಾಘು ಕುಣಬಿ, ಭಾಸ್ಕರ ಗೌಡ, ಗೆಬ್ರಿಯಲ್ ಫರ್ನಾಂಡಿಸ್, ನೂರಅಹಮದ್, ಸೀತಾ ಸಿದ್ಧಿ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top