ಯಲ್ಲಾಪುರ: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಅನುಷ್ಠಾನಗೊಳ್ಳುವುದು ಉತ್ತರ ಕನ್ನಡ ಜಿಲ್ಲೆಗೆ ಅತ್ಯಂತ ಅವಶ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದ್ದಾರೆ.
ಅವರು ಈ ಕುರಿತು ಮಂಗಳವಾರ ಹೇಳಿಕೆ ನೀಡಿ, ಬಯಲುಸೀಮೆ ಹಾಗೂ ಕರಾವಳಿ ಭಾಗವನ್ನು ಜೋಡಿಸುವ ಈ ಮಹತ್ವದ ಯೋಜನೆ, ನಿರುದ್ಯೋಗ ಸಮಸ್ಯೆಯ ನಿವಾರಣೆಗೆ, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಪರಿಸರ, ವನ್ಯಜೀವಿ, ರೈತರು ಹಾಗೂ ಬುಡಕಟ್ಟು ಸಮುದಾಯದವರಿಗೆ ತೊಂದರೆಯಾಗದಂತೆ ಯೋಜನೆ ಸಾಕಾರಗೊಳ್ಳಬೇಕು. ಸ್ಥಾನೀಯ ರೈತರು, ವನವಾಸಿಗಳು, ಜನಪ್ರತಿನಿಧಿಗಳು, ಪರಿಸರ ತಜ್ಞರು, ಅಧಿಕಾರಗಳ ಅಭಿಪ್ರಾಯ ಪಡೆದೇ ಮುಂದುವರಿಯಬೇಕು. ಒಟ್ಟಾರೆ ಯಾವುದೇ ಸಮಸ್ಯೆಗಳಿದ್ದರೂ ಧನಾತ್ಮಕ ಚಿಂತನೆಯೊಂದಿಗೆ ಅದನ್ನು ಬಗೆಹರಿಸಿ ರೈಲು ಮಾರ್ಗ ನಿರ್ಮಾಣವಾಗಿ ಯೋಜನೆ ಸಾಕಾರಗೊಳ್ಳುವಂತಾಗಬೇಕು ಎಂದರು.