ಯೆಲ್ಲಾಪುರ: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಅನೇಕ ಎಡರು-ತೊಡರುಗಳನ್ನು ದಾಟಿ ಕೊನೆಗೂ ನಿರ್ಣಾಯಕ ಘಟ್ಟ ತಲುಪಿದಂತಿದೆ.
ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು ಸಮಿತಿಯು ಸ್ಥಗಿತಗೊಂಡಿರುವ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಮಾರ್ಗ ಪರಿಶೀಲನೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕರಿಸುವ ಕಾರ್ಯ ಕೈಗೊಳ್ಳುತ್ತಿದೆ. ಅದರಂತೆ ಯಲ್ಲಾಪುರ ತಾಲೂಕಿನಲ್ಲಿ ಹಾದು ಹೋಗುವ ರೈಲ್ವೆ ಮಾರ್ಗದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೇಂದ್ರದಿಂದ ಆಗಮಿಸಿದ ತಂಡವು ಅರಬೈಲು ಘಟ್ಟ ಪ್ರದೇಶ , ಭೂಕುಸಿತವಾದ ತಳಕೇಬೈಲು, ಬಾಸಲ್‌ನ ಚಿಟಕೇಬೈಲ ಇನ್ನಿತರ ಸ್ಥಳಗಳಲ್ಲಿ ಪರಿಶೀಲನೆ ನಡೆಸಿತು.
ಸಮಿತಿಯ ಸದಸ್ಯರು ಮಾಧ್ಯಮದವರೊಂದಿಗೆ ಏನನ್ನೂ ಹಂಚಿಕೊಳ್ಳದೇ ತಮ್ಮ ಪರಿಶೀಲನಾ ಕಾರ್ಯ ಕೈಗೊಂಡು ಮುಕ್ತಾಯಗೊಳಿಸಿ ಮರಳಿದರು.