Slide
Slide
Slide
previous arrow
next arrow

ರೈಲು ಮಾರ್ಗ ಯೋಜನೆಯನ್ನು ಪಕ್ಷಾತೀತವಾಗಿ ಸ್ವಾಗತಿಸಲು ಅಸ್ನೋಟಿಕರ್ ಕರೆ

300x250 AD

ಕಾರವಾರ: ಕಳೆದ ಹಲವಾರು ವರ್ಷದಿಂದ ಅಂಕೋಲಾ- ಹುಬ್ಬಳ್ಳಿ ರೈಲ್ವೆಗೆ ಜಿಲ್ಲೆಯ ಜನರ ಬೇಡಿಕೆ ಈಡೇರುವ ಸುವರ್ಣ ಅವಕಾಶ ದೊರೆತಿದೆ. ನಾವೆಲ್ಲರೂ ಪಕ್ಷಾತೀತವಾಗಿ ಈ ಯೋಜನೆಗೆ ಸ್ವಾಗತಿಸಬೇಕಾಗಿದೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ತಿಳಿಸಿದ್ದಾರೆ.
ಈ ಯೋಜನೆಯು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಾಗುವ ಯೋಜನೆಯಾಗಿದ್ದು, ಕರ್ನಾಟಕ ರಾಜ್ಯದ ಕೈಗಾರಿಕೆಗಳಿಗೆ ಪೂರೈಸುವ ಕಚ್ಚಾ ಸಾಮಗ್ರಿಗಳು ನೆರೆ ಗೋವಾ ರಾಜ್ಯದ ಬಂದರನ್ನು ಅವಲಂಬಿಸಬೇಕಾಗಿದ್ದು, ಈ ರೇಲ್ವೆ ಯೋಜನೆಯಿಂದ ಜಿಲ್ಲೆಯ ಬಂದರು ಅಭಿವೃದ್ಧಿಯಾಗುವುದಲ್ಲದೆ ನಮ್ಮ ರಾಜ್ಯದ ಆರ್ಥಿಕತೆ ಬೆಳೆಯುವುದಲ್ಲದೆ ಗುಜರಾತ ಮಾದರಿಯಲ್ಲಿ ಪ್ರಗತಿ ಕಾಣಬಹುದಾಗಿದೆ. ಈ ರೈಲ್ವೆ ಯೋಜನೆಯಿಂದ ಬೆಂಗಳೂರಿಗೆ ಎಂಟು ತಾಸಿನ ಒಳಗೆ ತಲುಪುವದಲ್ಲದೆ ಉದ್ಯೋಗ ಅವಕಾಶ, ಚಿಕಿತ್ಸೆಗೆ ಹಾಗೂ ಕೈಗಾರಿಕೆಗೆ ಅನುಕೂಲವಾಗಲಿದೆ. ಇಂತಹ ಸುವರ್ಣ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಎಂದಿದ್ದಾರೆ.
ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಪರಿಸರವಾದಿಗಳಿಗೆ ಕೈ ಮುಗಿದು ವಿನಂತಿ ಮಾಡುತ್ತೇನೆ. ರಾಜ್ಯದಲ್ಲಿಯೇ ನಮ್ಮ ಜಿಲ್ಲೆಯು ಬಡತನ ರೇಖೆಗಿಂತ ಕಡಿಮೆ ಮಟ್ಟದಲ್ಲಿದ್ದು, ಶಿಕ್ಷಣ, ಆಸ್ಪತ್ರೆ, ಉದ್ಯೋಗದಲ್ಲಿ, ಕೈಗಾರಿಕೆಯಲ್ಲಿ ನಾವು ಹಿಂದೆ ಬಿದ್ದಿರುವದರಿಂದ ಈ ಯೋಜನೆಗೆ ಪರಿಸರವಾದಿಗಳು ಅಡ್ಡಪಡಿಸುವುದು ಸರಿಯಲ್ಲ. ಜಿಲ್ಲೆಯಲ್ಲಿ 95% ಅರಣ್ಯ ಪ್ರದೇಶ ಹೊಂದಿದ್ದು, ಈ ರೇಲ್ವೆ ಯೋಜನೆಗೆ ಕೇವಲ 1%ಕ್ಕಿಂತ ಕಡಿಮೆ ಅರಣ್ಯ ಭೂಮಿ ರೇಲ್ವೆ ಹಳಿ ಹಾಗೂ ರೈಲ್ವೆ ಕಾಮಗಾರಿಗೆ ಹೋಗಬಹುದಾಗಿದೆ. ಇಲ್ಲಿನ ಪರಿಸರ ಮತ್ತು ಪ್ರವಾಸೋದ್ಯಮಕ್ಕೆ ಈ ಯೋಜನೆಯಿಂದ ಸಾಕಷ್ಟು ಪ್ರವಾಸಿಗರು ಬರುವುದಲ್ಲದೆ ಜಿಲ್ಲೆಯಲ್ಲಿ ಐಟಿಬಿಟಿ ಉದ್ಯೋಗ ಅವಕಾಶ ವೃದ್ಧಿಯಾಗುವುದು ಎಂದು ತಿಳಿಸಿದ್ದಾರೆ.

ಕೋಟ್…
ರೈಲ್ವೆ ಯೋಜನೆಯಿಂದ ಸರ್ವ ಜನಾಂಗಕ್ಕೆ ಮೀನುಗಾರಿಕೆ, ಕೈಗಾರಿಕೆ, ರೈತರಿಗೆ, ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಪ್ರಸ್ತುತ ಜಿಲ್ಲೆಗೆ ಆಗಮಿಸಿರುವ ರೇಲ್ವೆ ಸಮಿತಿಯವರು ಈ ಯೋಜನೆಯ ಪರ ಒಳ್ಳೆಯ ನಿರ್ಣಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
• ಆನಂದ ಅಸ್ನೋಟಿಕರ್, ಮಾಜಿ ಸಚಿವ

300x250 AD
Share This
300x250 AD
300x250 AD
300x250 AD
Back to top