Slide
Slide
Slide
previous arrow
next arrow

ಕೃಷಿಕ ರೈತ ಮಹಿಳೆಯರ ಜೀವನೋಪಾಯ ಬಲವರ್ಧನೆಗೆ ಕೃಷಿ ಸಖಿಯರ ಸಾಥ್

300x250 AD

ಶಿರಸಿ: ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲ್ರಿ ಸೆ.26, ಸೋಮವಾರ DAY-NRLM ಸಂಜೀವಿನಿ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಕೃಷಿ ಸಖಿ ತರಬೇತಿಯನ್ನು ಉದ್ಘಾಟಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಾತಂತ್ರ್ಯದ ನಂತರ ಪ್ರಥಮ ಬಾರಿ ಸರ್ಕಾರದ ಕೃಷಿ ಸೌಲಭ್ಯಗಳು ನೇರವಾಗಿ ಬಡಕುಟುಂಬಗಳ ರೈತ ಮಹಿಳೆಯರಿಗೆ ತಲುಪಿಸಲು ಸಂಜೀವಿನಿ ಯೋಜನೆಯ ಫಲಾನುಭವಿ ಸ್ವ ಸಹಾಯ ಗುಂಪಿನ ಮಹಿಳೆಯರ ನೇರ ಭಾಗವಹಿಸುವಿಕೆ ಮೂಲಕ ಆನುಷ್ಠಾನ ಗೊಳಿಸುತ್ತಿದೆ.
ಈಗಾಗಲೇ ಸಂಜೀವಿನಿ ಯೋಜನೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಗ್ರಾಮೀಣ ಸ್ವಸಹಾಯ ಗುಂಪು ಗಳಿಗೆ ವಿವಿಧ ಜೀವನೋಪಾಯ ಸೌಲಭ್ಯವನ್ನು ನೀಡುತ್ತಿದ್ದು, ಕೃಷಿ ಯನ್ನು ಆವಲಂಬಿಸಿರುವ ಸ್ವ.ಸ.ಗುಂ ಮಹಿಳೆಯರಿಗೆ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಮನೆ ಬಾಗಿಲಿಗೆ ಕೃಷಿ ಸಂಬಂಧಿ ಮಾಹಿತಿಗಳನ್ನು ನೇರವಾಗಿ ತಲುಪಿಸುವ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಆನುಷ್ಠಾನ ಇತ್ಯಾದಿ ವಿಷಯಗಳ ಕುರಿತ 6 ದಿನದ ತರಬೇತಿಯಾಗಿದ್ದು ಜಿಲ್ಲೆಯ ವಿವಿಧ ತಾಲೂಕಿನ 30 ಮಹಿಳೆಯರು ಈ ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಸರ್ವರನ್ನು ಡಾ. ಶಿವಶಂಕರಮೂರ್ತಿ ಕೃಷಿ ವಿಜ್ಞಾನ ಕೇಂದ್ರ ಶಿರಸಿ ಯವರು ಸ್ವಾಗತಿಸಿದರು. ಕಿರಣ ಬಿ. ಏಸ್ ಟಿ. ಪಿ. ಎಮ್ ಶಿರಸಿ ರವರು ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಏ. ಜೆ. ಕೊಪ್ಪದ ಡೀನ್, ಆರಣ್ಯ ಮಹಾವಿದ್ಯಾಲಯ ಶಿರಸಿ ಯವರು ವಹಿಸಿ ಕೃಷಿ ಕಾಯಕದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮಹತ್ವ ಕುರಿತು ಮಾತನಾಡಿ ಎಲ್ಲ ಮಹಿಳೆಯರಿಗೂ ಶುಭ ಕೋರಿದರು. ಡಾ. ಶ್ರೀಪಾದ ಕುಲಕರ್ಣಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ, ಕರೀಮ್ ಆಸಾದಿ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಉ.ಕ ರವರು ಮುಖ್ಯ ಆತಿಥಿಗಳಾಗಿ ಆಗಮಿಸಿ ಕೃಷಿ ಸಖಿಯರ ಜವಾಬ್ದಾರಿ ಹಾಗೂ ಮಹತ್ವದ ಕುರಿತು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕೃಷಿ ಈಲಾಖೆ, ಶಿರಸಿ ಉಪ ನಿರ್ದೇಶಕ ನಟರಾಜು, ಕೃಷಿ ವಿಜ್ಞಾನ ಕೇಂದ್ರ ಶಿರಸಿ ಮುಖ್ಯಸ್ಥರು ಮಂಜು ಎಮ್. ಜೆ ಹಾಗೂ ಪುಡಲೀಕ ಸಿರ್ಸಿಕರ್ ಜಿಲ್ಲಾ ವ್ಯವಸ್ಥಾಪಕರು ಜಿಲ್ಲಾ ಪಂಚಾಯತ ಉ.ಕ ರವರು ಉಪಸ್ಥಿತರಿದ್ದರು. ರಾಮಣ್ಣ ಪನ್ನೇರ ವಲಯ ಮೇಲ್ವಿಚಾರಕರು ಶಿರಸಿ ರವರು ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top