• first
  Slide
  Slide
  previous arrow
  next arrow
 • ಸೆ.28, ಸೆ.30ಕ್ಕೆ ವಿದ್ಯುತ್ ವ್ಯತ್ಯಯ

  300x250 AD

  ಶಿರಸಿ: ಶಿರಸಿ ಉಪವಿಭಾಗ ಗ್ರಾಮೀಣ ಶಾಖೆ-2ರ ವ್ಯಾಪ್ತಿಯಲ್ಲಿ ಕುಮಟಾ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಅಡಚಣೆಯನ್ನುಂಟು ಮಾಡುವ ಕಂಬಗಳ ತೆರವು ಹಾಗೂ ಅದೇ ಮಾರ್ಗದಲ್ಲಿ ಹೊಸ 11ಕೆ.ವಿ ಮಾರ್ಗ ನಿರ್ಮಾಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.

  ಸೆ.28, ಬುಧವಾರ ಹಾಗೂ‌ ಸೆ.30 ಶುಕ್ರವಾರ ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆ ವರೆಗೆ ಗ್ರಾಮೀಣ ಶಾಖೆ-2ರ ಸಂಪಖಂಡ 11ಕೆ.ವಿ ಹಾಗೂ ಹನುಮಂತಿ ಸಾಲಿನ ಡೈರಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

  300x250 AD

  ಕಾಮಗಾರಿ ಪೂರ್ಣಗೊಂಡಲ್ಲಿ ಈ ಮೇಲೆ ತಿಳಿಸಿರುವ ಅವಧಿಯ ಮೊದಲೇ ವಿದ್ಯುತ್‌ ಸರಬರಾಜು ಮಾಡಲಾಗುವುದು. ಆದಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹ ಕಾರ್ಯನಿರ್ವಾಹಕ ಇಂಜಿನೀಯರು, ಕಾರ್ಯ & ಪಾಲನಾ ಉಪ -ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.

  Share This
  300x250 AD
  300x250 AD
  300x250 AD
  Back to top