• Slide
    Slide
    Slide
    previous arrow
    next arrow
  • ಕೆ.ಎಲ್.ಇ.ಎಸ್.ನ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಎಂಎನ್‌ಸಿಗೆ ಆಯ್ಕೆ

    300x250 AD

    ಅಂಕೋಲಾ: ಕೆ.ಎಲ್.ಇ.ಎಸ್. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 18 ವಿದ್ಯಾರ್ಥಿಗಳು ವಿವಿಧ ಮಲ್ಟಿ ನ್ಯಾಶನಲ್ ಕಂಪನಿಗಳಿಗೆ ಆಯ್ಕೆಯಾಗಿರುತ್ತಾರೆ.
    ಮಹಾಲಸಾ ಪೈ, ಪ್ರಜ್ಞಾ ನಾಯಕ, ಸಹನಾ ನಾಯ್ಕ, ಸಂಪಿಕಾ ಖಾರ್ವಿ, ವಿನುತಾ ಅಂಕೋಲೆಕರ್ ಇವರು ಬೆಂಗಳೂರಿನ Altruist Technologies pvt. Ltd.ಕಂಪನಿಯಲ್ಲಿ Business Associate ಆಗಿ ಆಯ್ಕೆಯಾಗಿದ್ದಾರೆ. ಅನ್ನಪೂರ್ಣ ಗುನಗಾ, ಆಶ್ರಿತಾ ನಾಯ್ಕ, ದಿವ್ಯಾ ಖಾರ್ವಿ, ಮೋಹಿತ ಹರಿಕಂತ್ರ, ಸ್ವಾತಿ ಶೆಟ್ಟಿ ಇವರು ಬೆಂಗಳೂರಿನ Cogent E Services ಕಂಪನಿಯಲ್ಲಿ Custmoer Service Associate ಆಗಿ ಆಯ್ಕೆಯಾಗಿರುತ್ತಾರೆ. ಅನುಷಾ ತಾಂಡೇಲ, ಪ್ರೀತಿಕಾ ಖಾರ್ವಿ, ಶುಭಶ್ರೀ ಮೆಹ್ತಾ ಇವರು ಹುಬ್ಬಳ್ಳಿಯ Imerit ನಲ್ಲಿ Technician ಆಗಿ ಆಯ್ಕೆಯಾಗಿರುತ್ತಾರೆ. ಶ್ರೀರಕ್ಷಾ ನಾಯಕ, ಸ್ನೇಹಾ ನಾಯ್ಕ, ವಿಕ್ರಾಂತ ಬಾನಾವಳಿಕರ ಇವರು HDB Financial Service ನಲ್ಲಿ Relationship Executive ಆಗಿ ಆಯ್ಕೆಯಾಗಿರುತ್ತಾರೆ. ಅಂಕಿತಾ ಸ್ವಾಮಿ, ಶ್ರೀದೇವಿ ನಾಯ್ಕ ಇವರು ಬೆಂಗಳೂರಿನ SIB Operations and Services ನಲ್ಲಿ Tele caller ಆಗಿ ಆಯ್ಕೆಯಾಗಿರುತ್ತಾರೆ.
    ಈ ಎಲ್ಲ ವಿದ್ಯಾರ್ಥಿಗಳು ಕೆ.ಎಲ್.ಇ ಸಂಸ್ಥೆ ಹಾಗೂ ದೇಶಪಾಂಡೆ ಫೌಂಡೇಶನ್ಸ್ನ ಸಹಯೋಗದಲ್ಲಿ ನಡೆದಿರುವ ಸ್ಕಿಲ್‌ಫ್ಲಸ್ ಟ್ರೇನಿಂಗ್‌ನಲ್ಲಿ ತರಬೇತಿ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕೆ.ಎಲ್.ಇ. ಸಂಸ್ಥೆಯ ಕಾರ್ಯಧ್ಯಕ್ಷ ಡಾ. ಪ್ರಭಾಕರ ಮೋರೆ, ಕಾರ್ಯದರ್ಶಿ ಡಾ. ಬಿ.ಜಿ. ದೇಸಾಯಿ, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಡಿ.ಎಲ್. ಭಟ್ಕಳ, ಸಂಯೋಜಕ ಆರ್. ನಟರಾಜ, ಆಡಳಿತಾಧಿಕಾರಿ ಡಾ. ಮಿನಲ್ ನಾರ್ವೇಕರ ಹಾಗೂ ಪ್ರಾಚಾರ್ಯ ನಾಗಮ್ಮ ಮಮದಾಪೂರ ಹಾಗೂ ಸಮಸ್ತ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top